BIG NEWS: ಕೋವಿಡ್ ಮುಕ್ತ ನಗರವಾದ ಮುಂಬೈ ಮಹಾನಗರ
ಮುಂಬೈ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತಗೊಂಡಿದೆ. ವಾಣಿಜ್ಯ ನಗರಿ ಮುಂಬೈ ಕೋವಿಡ್ ಮುಕ್ತ ನಗರವಾಗಿದ್ದು, 24 ಗಂಟೆಯಲ್ಲಿ ಯಾವುದೇ ಕೋವಿಡ್ ಪ್ರಕರಣ ದಾಖಲಾಗಿಲ್ಲ.
ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಕೇವಲ 6 ಜನರಲ್ಲಿ ಕೋವಿಡ್ ಪ್ರಕರಣ ಪತ್ತೆಗಿದೆ. ಆದರೆ ಮುಂಬೈ ನಗರದಲ್ಲಿ ಶೂನ್ಯ ಕೋವಿಡ್ ಪ್ರಕರಣದಾಖಲಾಗಿದ್ದು, ಯಾವುದೇ ಕೋವಿಡ್ ಕೇಸ್ ಪತ್ತೆಯಾಗಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
34 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಮುಂಬೈ ಮಹಾನಗರದಲ್ಲಿ ಶೂನ್ಯ ಕೋವಿಡ್ ಪ್ರಕರಣ ದಾಖಲಾಗಿದ್ದು, ವಾಣಿಜ್ಯನಗರಿ ಜನತೆ ಹೆಮ್ಮಾರಿ ಭೀತಿಯಿಂದ ನಿಟ್ಟುಸಿರು ಬಿಡುವಂತಾಗಿದೆ.