Tuesday, December 6, 2022
Google search engine
HomeUncategorizedBIG NEWS: ಕೋಲಾರದಿಂದ ಸ್ಪರ್ಧೆ ವಿಚಾರ; ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ; ವಿಶೇಷ ಬಸ್ ನಲ್ಲಿ ಕ್ಷೇತ್ರದತ್ತ...

BIG NEWS: ಕೋಲಾರದಿಂದ ಸ್ಪರ್ಧೆ ವಿಚಾರ; ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ; ವಿಶೇಷ ಬಸ್ ನಲ್ಲಿ ಕ್ಷೇತ್ರದತ್ತ ಪ್ರಯಾಣ

BIG NEWS: ಕೋಲಾರದಿಂದ ಸ್ಪರ್ಧೆ ವಿಚಾರ; ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ; ವಿಶೇಷ ಬಸ್ ನಲ್ಲಿ ಕ್ಷೇತ್ರದತ್ತ ಪ್ರಯಾಣ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಇಂದು ಕ್ಷೇತ್ರವಾರು ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ವಿಶೇಷ ಬಸ್ ನಲ್ಲಿ ಸಿದ್ದರಾಮಯ್ಯ ಕೋಲಾರಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಈ ವೇಳೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವರುಣಾ, ಬಾದಾಮಿ, ಚಾಮರಾಜಪೇಟೆ ಸೇರಿದಂತೆ ಹಲವೆಡೆಗಳಿಂದ ಸ್ಪರ್ಧಿಸುವಂತೆ ಒತ್ತಡ ಬಂದಿದೆ. ಚಾಮರಾಜಪೇಟೆಯಿಂದ ಸ್ಪರ್ಧಿಸಿ ಎಂದು ಜನರು ಹೆಚ್ಚು ಒತ್ತಡ ಹಾಕುತ್ತಿದ್ದಾರೆ. ಆದರೆ ಈ ಬಾರಿ ಕೋಲಾರದಿಂದ ಶ್ರೀನಿವಾಸ್ ಗೌಡ ಸ್ಪರ್ಧಿಸಲ್ಲ. ಹಾಗಾಗಿ ನೀವು ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ನಾಯಕರು ಒತ್ತಾಯಿಸಿದ್ದಾರೆ ಎಂದರು.

ಇದೇ ಕಾರಣಕ್ಕೆ ಅಲ್ಲಿ ಹೋಗಿ ಪರಿಶೀಲನೆ ನಡೆಸಲು ಕೋಲಾರಕ್ಕೆ ಹೊರಟಿದ್ದೇನೆ. ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಚರ್ಚೆ ನಡೆಸಿ ಅಂತಿಮವಾಗಿ ತೀರ್ಮಾನಿಸುತ್ತೇನೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments