Sunday, September 25, 2022
Google search engine
HomeUncategorizedBIG NEWS: ಕೇವಲ 2 ತಿಂಗಳಲ್ಲೇ ಬೇರ್ಪಟ್ಟರಾ ಲಲಿತ್ ಮೋದಿ – ಸುಶ್ಮಿತಾ ಸೇನ್ ?...

BIG NEWS: ಕೇವಲ 2 ತಿಂಗಳಲ್ಲೇ ಬೇರ್ಪಟ್ಟರಾ ಲಲಿತ್ ಮೋದಿ – ಸುಶ್ಮಿತಾ ಸೇನ್ ? ವದಂತಿಗಳಿಗೆ ಕಾರಣವಾಯ್ತು ಡಿಸ್ ಪ್ಲೇ ಫೋಟೋ

BIG NEWS: ಕೇವಲ 2 ತಿಂಗಳಲ್ಲೇ ಬೇರ್ಪಟ್ಟರಾ ಲಲಿತ್ ಮೋದಿ – ಸುಶ್ಮಿತಾ ಸೇನ್ ? ವದಂತಿಗಳಿಗೆ ಕಾರಣವಾಯ್ತು ಡಿಸ್ ಪ್ಲೇ ಫೋಟೋ

ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಎರಡು ತಿಂಗಳ ಹಿಂದೆ ತಾವು ನಟಿ ಸುಶ್ಮಿತಾ ಸೇನ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೆ ಇಬ್ಬರು ಸದ್ಯದಲ್ಲೇ ವಿವಾಹವಾಗುವ ಸುಳಿವನ್ನು ನೀಡಿದ್ದು, ತಾವಿಬ್ಬರೂ ಜೊತೆಗಿರುವ ಫೋಟೋವನ್ನು ಲಲಿತ್ ಮೋದಿ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನ ಡಿಸ್ ಪ್ಲೇ ಫೋಟೋವನ್ನ ಹಾಕಿಕೊಂಡಿದ್ದರು.

ಆದರೆ ಇದೀಗ ಏಕಾಏಕಿ ಸುಶ್ಮಿತಾ ಸೇನ್ ಜೊತೆಗೆ ಇದ್ದ ಫೋಟೋವನ್ನು ಲಲಿತ್ ಮೋದಿ ತೆಗೆದು ಹಾಕಿದ್ದು, ಜೊತೆಗೆ ಬಯೋದಲ್ಲಿ ಬರೆದುಕೊಂಡಿದ್ದ ಸಂಗತಿಯನ್ನು ಅಳಿಸಿದ್ದಾರೆ. ಈ ಮೂಲಕ ಕೇವಲ ಎರಡು ತಿಂಗಳ ಅವಧಿಯಲ್ಲಿ ಇವರಿಬ್ಬರೂ ಬೇರೆಯಾದರಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ.

ಲಲಿತ್ ಮೋದಿ, ಸುಶ್ಮಿತಾ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ಸಂಗತಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಸಹ ಸುಶ್ಮಿತಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಆದರೆ ಕೆಲವರು ಲಲಿತ್ ಮೋದಿ ಬಳಿ ಇರುವ ಹಣದ ಹಿಂದೆ ಸುಶ್ಮಿತಾ ಬಿದ್ದಿದ್ದಾರೆಂದು ಲೇವಡಿ ಮಾಡಿದ ವೇಳೆ ಪರೋಕ್ಷ ಉತ್ತರ ನೀಡಿದ್ದರು. ಈಗಲೂ ಸಹ ಸುಶ್ಮಿತಾ ಸೇನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments