Monday, December 5, 2022
Google search engine
HomeUncategorizedBIG NEWS: ಕಾಂತಾರಾ ಚಿತ್ರಕ್ಕೆ ಹೊಸ ಸಂಕಷ್ಟ: ಸಿನಿಮಾ ಪ್ರಕದರ್ಶನಕ್ಕೆ ತಡೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ

BIG NEWS: ಕಾಂತಾರಾ ಚಿತ್ರಕ್ಕೆ ಹೊಸ ಸಂಕಷ್ಟ: ಸಿನಿಮಾ ಪ್ರಕದರ್ಶನಕ್ಕೆ ತಡೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ

BIG NEWS: ಕಾಂತಾರಾ ಚಿತ್ರಕ್ಕೆ ಹೊಸ ಸಂಕಷ್ಟ: ಸಿನಿಮಾ ಪ್ರಕದರ್ಶನಕ್ಕೆ ತಡೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿವೆ.

ಕಾಂತಾರಾ ಚಿತ್ರದಲ್ಲಿ ದಲಿತರಿಗೆ ಹಾಗೂ ದೈವ ನರ್ತಕರಿಗೆ ಅವಮಾನ ಮಾಡಲಾಗಿದೆ. ಚಿತ್ರದಲ್ಲಿ ದಲಿತ ಮಹಿಳೆಯರು, ಯುವ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ. ಕೆಳ ಸಮುದಾಯದ ಯುವಕರನ್ನು ಪೋಲಿ ಹುಡುಗರು ಎಂಬಂತೆ ತೋರಿಸಲಾಗಿದೆ. ಹಣ, ಹೆಂಡ ಕೊಟ್ಟರೆ ಏನು ಬೇಕಾದರೂ ಮಾಡ್ತಾರೆ ಎಂಬಂತೆ ಬಿಂಬಿಸಲಾಗಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

ದೈವ ನರ್ತಕರು ಕೂಡ ನಮ್ಮ ಜೊತೆ ನೋವು ತೋಡಿಕೊಂಡಿದ್ದಾರೆ. ದೈವ ನರ್ತಕರ ಕುಟುಂಬದವರನ್ನೂ ಅವಮಾನಿಸಲಾಗಿದೆ. ಸೆನ್ಸಾರ್ ಮಂಡಳಿ ಮತ್ತೆ ಕಾಂತಾರಾ ಚಿತ್ರವನ್ನು ಪರಿಶೀಲಿಸಬೇಕು ಎಂದು ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments