Saturday, November 26, 2022
Google search engine
HomeUncategorizedBIG NEWS: ಏರ್ಟೆಲ್‌ ಗೆ ಒಂದೇ ತಿಂಗಳಲ್ಲಿ 10 ಲಕ್ಷ 5 ಜಿ ಗ್ರಾಹಕರು

BIG NEWS: ಏರ್ಟೆಲ್‌ ಗೆ ಒಂದೇ ತಿಂಗಳಲ್ಲಿ 10 ಲಕ್ಷ 5 ಜಿ ಗ್ರಾಹಕರು

BIG NEWS: ಏರ್ಟೆಲ್‌ ಗೆ ಒಂದೇ ತಿಂಗಳಲ್ಲಿ 10 ಲಕ್ಷ 5 ಜಿ ಗ್ರಾಹಕರು

ನವದೆಹಲಿ: 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ ಬೆನ್ನಲ್ಲೇ ಏರ್​ಟೆಲ್​ ದಾಖಲೆ ಬರೆದಿದೆ. ಆರಂಭದ 30 ದಿನಗಳಲ್ಲೇ 10 ಲಕ್ಷ 5ಜಿ ಗ್ರಾಹಕರನ್ನು ತಾನು ಹೊಂದಿರುವುದಾಗಿ ದೂರಸಂಪರ್ಕ ಕಂಪನಿ ಭಾರ್ತಿ ಏರ್​ಟೆಲ್ ತಿಳಿಸಿದೆ.

ಸದ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಏರ್​ಟೆಲ್ 5ಜಿ ಸೇವೆ ಆರಂಭವಾಗಿಲ್ಲ. ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುವುದಾಗಿ ಕಂಪೆನಿ ತಿಳಿಸಿತ್ತು. ಇದೀಗ ಸೇವೆ ವಿಸ್ತರಿಸುವ ಹಂತದಲ್ಲಿರುವಾಗಲೇ ಭಾರಿ ಸಂಖ್ಯೆಯ ಗ್ರಾಹಕರು ದೊರೆತಿದ್ದಾರೆ ಎಂದು ಅದು ಹೇಳಿಕೆ ನೀಡಿದೆ.

ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿದೆ. ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಾಣಸಿಗಳಲ್ಲಿ ಹಂತಹಂತವಾಗಿ 5ಜಿ ಸೇವೆ ಆರಂಭಿಸುವುದಾಗಿ ಏರ್​​ಟೆಲ್ ಹೇಳಿತ್ತು. ಈ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುವ ಕೆಲಸ ನಡೆಯುತ್ತಿದೆ ಎಂದು ಈಗ ಕಂಪೆನಿ ಹೇಳಿಕೊಂಡಿದೆ. ನೆಟ್​ವರ್ಕ್​ ವಿಸ್ತರಣೆ ಕಾರ್ಯ ಪೂರ್ತಿ ನಡೆಯುವುದಕ್ಕೂ ಮುನ್ನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ’ ಎಂದು ಅದು ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments