Wednesday, August 10, 2022
Google search engine
HomeUncategorizedBIG NEWS: ಇದು ಭ್ರಷ್ಟಾಚಾರಕ್ಕೆ ಮೌನ ಸಮ್ಮತಿಯೇ ? ಅಥವಾ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಯೇ ?...

BIG NEWS: ಇದು ಭ್ರಷ್ಟಾಚಾರಕ್ಕೆ ಮೌನ ಸಮ್ಮತಿಯೇ ? ಅಥವಾ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಯೇ ? ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಸರಣಿ ಪ್ರಶ್ನೆ

BIG NEWS: ಇದು ಭ್ರಷ್ಟಾಚಾರಕ್ಕೆ ಮೌನ ಸಮ್ಮತಿಯೇ ? ಅಥವಾ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಯೇ ? ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಸರಣಿ ಪ್ರಶ್ನೆ

ಬೆಂಗಳೂರು: ತೋಟಗಾರಿಕಾ ಸಚಿವ ಮುನಿರತ್ನರವರ ಕಮಿಷನ್ ಲೂಟಿಯ ಬಗ್ಗೆ ಪ್ರಧಾನಿಗೆ ಪತ್ರ ತಲುಪಿದೆ, ಸಿಎಂ ಬೊಮ್ಮಾಯಿಯವರೇ ನಿಮಗೂ ಬರಲಿಲ್ಲವೇ? ಹನಿ ನೀರಾವರಿ ವಿತರಕರ ಸಂಘ ನಿಮಗೆ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳದವರು ಭ್ರಷ್ಟಾಚಾರದ ರಕ್ಷಕನಂತೆ ನಿಂತಿದ್ದೀರಿ ಎಂದು ರಾಜ್ಯ ಕಾಂಗ್ರೆಸ್ ಘಟಕ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.

ನಮ್ಮದು ಪ್ರಾಮಾಣಿಕ, ಪಾರದರ್ಶಕ ತನಿಖೆ ಎನ್ನುತ್ತಿರುವ ಸಿಎಂ ಬಸವ್ರಾಜ್ ಬೊಮ್ಮಾಯಿ ಅವರೇ, ಬಿಟ್ ಕಾಯಿನ್ ಹಗರಣದ ತನಿಖೆ ಎಲ್ಲಿಯವರೆಗೂ ಬಂದಿದೆ? ಆರೋಪಿ ಶ್ರೀಕಿ ಎಲ್ಲಿ ಹೋದ? ‘ಬಿಟ್ ಕಾಯಿನ್’ ಪದ ಕೇಳಿದಾಕ್ಷಣ ನೀವು ಹಾಗೂ ನಿಮ್ಮ ಪಕ್ಷದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಮೌನಕ್ಕೆ ಜಾರುವುದೇಕೆ? ಎಲ್ಲಿ ನಿಮ್ಮ ಪಾರದರ್ಶಕತೆ? ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

ತೋಟಗಾರಿಕಾ ಸಚಿವ ಮುನಿರತ್ನರ ಕ್ಷೇತ್ರದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವ ಮುಖ್ಯಮಂತ್ರಿಗಳು, ಮುನಿರತ್ನರ ವಿರುದ್ಧ ಕಮಿಷನ್ ಕಿರುಕುಳದ ದೂರು ಬಂದರೂ ಕ್ರಮ ಕೈಗೊಳ್ಳದಿರುವ ತಮ್ಮ ನಡೆ ಭ್ರಷ್ಟಾಚಾರಕ್ಕೆ ಮೌನ ಸಮ್ಮತಿಯೇ? ಅಥವಾ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಯೇ? ಎಂದು ಕೇಳಿದೆ.

ಬಿಜೆಪಿ ಕರೆಪ್ಶನ್ ಫೈಲ್ಸ್ ನ ಆಳ ಮತ್ತು ಅಗಲ ಅಳತೆಗೂ ಮೀರಿದ್ದು. ಕಾರ್ಮಿಕ ಇಲಾಖೆಯಲ್ಲಿ ಟೂಲ್ ಕಿಟ್ ಖರೀದಿಯಲ್ಲಿ ನಡೆದ ಅಕ್ರಮವನ್ನು ಮುಚ್ಚಿ ಹಾಕಲಾಯ್ತು. ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ವಿರುದ್ಧದ ರೋಲ್‌ಕಾಲ್ ಆರೋಪವನ್ನು ಅದುಮಿ ಹಾಕಲಾಯ್ತು. ಕರೋನಾ ಕಾಲದ ವೈದ್ಯಕೀಯ ಉಪಕರಣಗಳ ಖರೀದಿ ಹಗರಣದ ತನಿಖೆಯೇ ಆಗಲಿಲ್ಲ. ಹೀಗಿರುವಾಗ ಸಿಎಂ ಬೊಮ್ಮಾಯಿ ಭ್ರಷ್ಟಾಚಾರದ ರಕ್ಷಕರಂತೆ ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments