Friday, October 7, 2022
Google search engine
HomeUncategorizedBIG NEWS: ಇಂದಿನಿಂದ ಬನಾರಸ್ ಸೀರೆಗೆ ಕರುನಾಡಿನ ರೇಷ್ಮೆ; ವಾರಣಾಸಿಯಲ್ಲಿ ಮಾರುಕಟ್ಟೆಗೆ ಚಾಲನೆ

BIG NEWS: ಇಂದಿನಿಂದ ಬನಾರಸ್ ಸೀರೆಗೆ ಕರುನಾಡಿನ ರೇಷ್ಮೆ; ವಾರಣಾಸಿಯಲ್ಲಿ ಮಾರುಕಟ್ಟೆಗೆ ಚಾಲನೆ

BIG NEWS: ಇಂದಿನಿಂದ ಬನಾರಸ್ ಸೀರೆಗೆ ಕರುನಾಡಿನ ರೇಷ್ಮೆ; ವಾರಣಾಸಿಯಲ್ಲಿ ಮಾರುಕಟ್ಟೆಗೆ ಚಾಲನೆ

ವಿಶ್ವ ವಿಖ್ಯಾತ ಬನಾರಸ್ ಸೀರೆ ತಯಾರಿಗೆ ಇನ್ನು ಮುಂದೆ ಕರುನಾಡಿನ ರೇಷ್ಮೆ ಬಳಕೆಯಾಗಲಿದ್ದು, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಇಂದು ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಉತ್ತರ ಪ್ರದೇಶ ರೇಷ್ಮೆ ಖಾದಿ ಗ್ರಾಮೋದ್ಯೋಗ ಸಚಿವ ರಾಕೇಶ್ ಸಾಚಾನ್, ವಾರಣಾಸಿ ಶಾಸಕ ರವೀಂದ್ರ ಜೈಸ್ವಾಲ್ ಮೊದಲಾದವರು ಹಾಜರಿದ್ದು, ರೇಷ್ಮೆ ಮಾರುಕಟ್ಟೆ ಆರಂಭದ ಕುರಿತು ಮಾತನಾಡಿದ ನಾರಾಯಣಗೌಡ, ಕರ್ನಾಟಕ ರೇಷ್ಮೆ ಮಂಡಳಿ ಮಾರುಕಟ್ಟೆಯ ಮೂಲಕ ಉತ್ತಮ ಗುಣಮಟ್ಟದ ರೇಷ್ಮೆಯನ್ನು ಪೂರೈಸಲಾಗುತ್ತದೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಉತ್ತರಪ್ರದೇಶ ರೇಷ್ಮೆ ಸಚಿವ ರಾಕೇಶ್ ಸಾಚಾನ್, ವಾರಣಾಸಿಯಲ್ಲಿ ಬನಾರಸ್ ಸೀರೆ ಉತ್ಪಾದನೆ ಹೆಚ್ಚಾಗಿದ್ದು, ಆದರೆ ಚೀನಾ ರೇಷ್ಮೆಗೆ ಕಡಿವಾಣ ಹಾಕಿದ ಬಳಿಕ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಉತ್ತರ ಪ್ರದೇಶದಲ್ಲಿ ಬಳಕೆಗಿಂತ ಕಡಿಮೆ ರೇಷ್ಮೆ ಉತ್ಪಾದನೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕದೊಂದಿಗೆ ಒಡಂಬಡಿಕೆ ಮಾಡಿಕೊಂಡು ಉತ್ಪಾದನೆ ಸೇರಿದಂತೆ ಇತರೆ ಎಲ್ಲ ರೀತಿಯ ನೆರವು ಪಡೆಯುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments