Saturday, September 24, 2022
Google search engine
HomeUncategorizedBIG BREAKING: ಮುರುಘಾಮಠದ ತಾತ್ಕಾಲಿಕ ಉಸ್ತುವಾರಿಯಾಗಿ ಹೆಬ್ಬಾಳು ಶ್ರೀ ನೇಮಕ

BIG BREAKING: ಮುರುಘಾಮಠದ ತಾತ್ಕಾಲಿಕ ಉಸ್ತುವಾರಿಯಾಗಿ ಹೆಬ್ಬಾಳು ಶ್ರೀ ನೇಮಕ

BIG BREAKING: ಮುರುಘಾಮಠದ ತಾತ್ಕಾಲಿಕ ಉಸ್ತುವಾರಿಯಾಗಿ ಹೆಬ್ಬಾಳು ಶ್ರೀ ನೇಮಕ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರುಘಾಶ್ರೀಗಳ ಬಂಧನವಾಗುತ್ತಿದ್ದಂತೆ ಐತಿಹಾಸಿಕ ಮುರುಘಾ ಮಠಕ್ಕೆ ಪೀಠಾಧಿಪತಿ ಇಲ್ಲದಂತಾಗಿದ್ದು, ಮಠದಲ್ಲಿ ನೀರವ ಮೌನ ಆವರಿಸಿದೆ. ಡಾ.ಶಿವಮೂರ್ತಿ ಶರಣರ ಬಂಧನ ಬೆನ್ನಲ್ಲೇ ಇದೀಗ ಮುರುಘಾ ಮಠಕ್ಕೆ ತಾತ್ಕಾಲಿಕ ಉಸ್ತುವಾರಿ ನೇಮಕ ಮಾಡಲಾಗಿದೆ.

ಚಿತ್ರದುರ್ಗದ ಮುರುಘಾ ಮಠಕ್ಕೆ ದಾವಣಗೆರೆಯ ಹೆಬ್ಬಾಳು ಶಾಖಾ ಮಠದ ಮಹಾಂತರುದ್ರ ಸ್ವಾಮೀಜಿಗಳನ್ನು ತಾತ್ಕಾಲಿಕ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ದಾವಣಗೆರೆ ಜಿಲ್ಲೆಯ ಹೆಬ್ಬಾಳದಲ್ಲಿರುವ ಮುರುಘಾಮಠದ ಶಾಖಾ ಮಠದ ಹಿರಿಯ ಸ್ವಾಮೀಜಿಗಳಾಗಿರಿವ ಮಹಾಂತ ರುದ್ರ ಸ್ವಾಮೀಜಿ ಅವರಿಗೆ ಚಿತ್ರದುರ್ಗ ಮಠದ ಆಗುಹೋಗುಗಳ ಎಲ್ಲ ಜವಾಬ್ದಾರಿಯನ್ನು ಸಧ್ಯಕ್ಕೆ ವಹಿಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಮಹಾಂತರುದ್ರ ಸ್ವಾಮೀಜಿ ನಿರಾಕರಿಸಿದ್ದು, ಉಸ್ತುವಾರಿ ವಹಿಸಿರುವ ಬಗ್ಗೆ ಏನನ್ನೂ ಹೇಳುವುದಿಲ್ಲ. ಶಿವಮೂರ್ತಿ ಶರಣರು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಭೇಟಿಗೆ ಬಂದಿದ್ದೇನೆ ಎಂದಷ್ಟೇ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments