Wednesday, August 10, 2022
Google search engine
HomeUncategorizedBIG BREAKING: ಬೆಂಗಳೂರಲ್ಲಿ ಶಂಕಿತ ಉಗ್ರ ಅರೆಸ್ಟ್

BIG BREAKING: ಬೆಂಗಳೂರಲ್ಲಿ ಶಂಕಿತ ಉಗ್ರ ಅರೆಸ್ಟ್

BIG BREAKING: ಬೆಂಗಳೂರಲ್ಲಿ ಶಂಕಿತ ಉಗ್ರ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತಿಲಕ್ ನಗರದಲ್ಲಿ ಲಷ್ಕರ್ ಅಖ್ತರ್ ಹುಸೇನ್ ಎಂಬುವನನ್ನು ವಶಕ್ಕೆ ಪಡೆಯಲಾಗಿದೆ. ಕೆಲವು ತಿಂಗಳಿನಿಂದ ತಿಲಕ್ ನಗರದಲ್ಲಿ ಈತ ವಾಸವಾಗಿದ್ದ. ಉಗ್ರ ಹುಸೇನ್ ನನ್ನು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ.

ದಾಳಿ ವೇಳೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ತಿಲಕ್ ನಗರದ ಬಿಟಿಪಿ ಏರಿಯಾದ ಮೂರನೇ ಅಂತಸ್ತಿನ ಹಳೆ ಕಟ್ಟಡದಲ್ಲಿ ಈತ ವಾಸವಾಗಿದ್ದ. ಸ್ಥಳೀಯರೊಂದಿಗೆ ಈತ ಸಂಪರ್ಕ ಹೊಂದಿರಲಿಲ್ಲ. ಮಹತ್ವದ ಸಾಕ್ಷಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರು ಶಂಕಿತ ಉಗ್ರನ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಮೂಲಕ ಬೆಂಗಳೂರು ಉಗ್ರರ ಭಯೋತ್ಪಾದನಾ ಚಟುವಟಿಕೆಗಳಿಗೆ ಸ್ಲೀಪರ್ ಸೆಲ್ ಆಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments