Tuesday, September 27, 2022
Google search engine
HomeUncategorizedBIG BREAKING: ಬಿಜೆಪಿ ಜನೋತ್ಸವ ಸಮಾವೇಶ ಮತ್ತೆ ಮುಂದೂಡಿಕೆ; ಹೊಸ ದಿನಾಂಕ ನಿಗದಿ

BIG BREAKING: ಬಿಜೆಪಿ ಜನೋತ್ಸವ ಸಮಾವೇಶ ಮತ್ತೆ ಮುಂದೂಡಿಕೆ; ಹೊಸ ದಿನಾಂಕ ನಿಗದಿ

BIG BREAKING: ಬಿಜೆಪಿ ಜನೋತ್ಸವ ಸಮಾವೇಶ ಮತ್ತೆ ಮುಂದೂಡಿಕೆ; ಹೊಸ ದಿನಾಂಕ ನಿಗದಿ

ಬೆಂಗಳೂರು: ನಾಳೆ ನಿಗದಿಯಾಗಿದ್ದ ಬಿಜೆಪಿ ಜನೋತ್ಸವ ಸಮಾವೇಶ ಮತ್ತೆ ಮುಂದೂಡಿಕೆಯಾಗಿದೆ. ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಾಗೂ ವಿಧಾನಸಭಾ ಚುನಾವಣೆ ನಿಟ್ಟಿನಲ್ಲಿ ಕೈಗೊಂಡ ಬಿಜೆಪಿ ಕಾರ್ಯಕ್ರಮಗಳ ರೂಪು ರೇಷೆ ವಿವರಣೆ ನೀಡುವ ನಿಟ್ಟಿನಲ್ಲಿ ನಾಳೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನೋತ್ಸವ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದರೆ ಆಹಾರ ಸಚಿವರ ಅಕಾಲಿಕ ಮರಣ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮ ಇದೀಗ ಸೆ.11ರಂದು ಭಾನುವಾರಕ್ಕೆ ಮುಂದೂಡಲಾಗಿದೆ.

ಬಿಜೆಪಿ ಜನೋತ್ಸವ ಕಾರ್ಯಕ್ರಮಕ್ಕೆ ಈ ಹಿಂದೆಯೂ ಅಡ್ಡಿಯುಂಟಾಗಿತ್ತು. ಈ ಹಿಂದೆ ನಿಗದಿಯಾಗಿದ್ದ ಜನೋತ್ಸವ ಸಮಾವೇಶ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments