Thursday, August 11, 2022
Google search engine
HomeUncategorized87 ಕೋಟಿ ರೂ. ಅಕ್ರಮ ಆಸ್ತಿಗಳಿಕೆ ಪ್ರಕರಣ: ಶಾಸಕ ಜಮೀರ್ ಗೆ ನೋಟಿಸ್

87 ಕೋಟಿ ರೂ. ಅಕ್ರಮ ಆಸ್ತಿಗಳಿಕೆ ಪ್ರಕರಣ: ಶಾಸಕ ಜಮೀರ್ ಗೆ ನೋಟಿಸ್

87 ಕೋಟಿ ರೂ. ಅಕ್ರಮ ಆಸ್ತಿಗಳಿಕೆ ಪ್ರಕರಣ: ಶಾಸಕ ಜಮೀರ್ ಗೆ ನೋಟಿಸ್

ಬೆಂಗಳೂರು: ಆದಾಯಕ್ಕಿಂತ 87.44 ಕೋಟಿ ರೂ. ಹೆಚ್ಚು ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ವಿಚಾರಣೆಗೆ ಹಾಜರಾಗಲು ಎಸಿಬಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇತ್ತೀಚೆಗೆ ಜಮೀರ್ ಅಹ್ಮದ್ ನಿವಾಸ ಕಚೇರಿ ಸೇರಿದಂತೆ 5 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು. ಸೂಕ್ತ ದಾಖಲೆ ಪತ್ರಗಳನ್ನು ಒದಗಿಸುವಂತೆ ತಿಳಿಸಲಾಗಿತ್ತು. ಆದರೆ, ಬಕ್ರೀದ್ ಹಬ್ಬದ ಕಾರಣ ಜಮೀರ್ ಕಾಲಾವಕಾಶ ಕೇಳಿದ್ದರು. ಹಬ್ಬ ಮುಗಿದ ಹಿನ್ನೆಲೆಯಲ್ಲಿ ಎಸಿಬಿಯಿಂದ ದಾಖಲೆ ಪತ್ರ ಸಲ್ಲಿಸಲು ಮತ್ತು ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments