Saturday, November 26, 2022
Google search engine
HomeUncategorized75 ಜಿಲ್ಲೆಗಳ ಹೆಸರುಗಳನ್ನು ಕ್ಷಣಮಾತ್ರದಲ್ಲಿ ಫಟಫಟ ಹೇಳ್ತಾಳೆ ಪುಟ್ಟ ಬಾಲಕಿ

75 ಜಿಲ್ಲೆಗಳ ಹೆಸರುಗಳನ್ನು ಕ್ಷಣಮಾತ್ರದಲ್ಲಿ ಫಟಫಟ ಹೇಳ್ತಾಳೆ ಪುಟ್ಟ ಬಾಲಕಿ

75 ಜಿಲ್ಲೆಗಳ ಹೆಸರುಗಳನ್ನು ಕ್ಷಣಮಾತ್ರದಲ್ಲಿ ಫಟಫಟ ಹೇಳ್ತಾಳೆ ಪುಟ್ಟ ಬಾಲಕಿ

ಉತ್ತರ ಪ್ರದೇಶದ ಮಗುವೊಂದು ಒಂದೇ ಉಸಿರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಹೆಸರುಗಳನ್ನು ಪಠಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಪತ್ರಕರ್ತ ಶುಭಂಕರ್​ ಮಿಶ್ರಾ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಬಾಲಕಿ ಕೇವಲ 38 ಸೆಕೆಂಡ್​ಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಹೆಸರನ್ನು ಹೇಳಿದ್ದಾಳೆ.

ನಂಬಲು ಅಸಾಧ್ಯ, ಆದರೂ ವಿಡಿಯೋ ನೋಡಿದರೆ ಖಾತ್ರಿಯಾಗುತ್ತದೆ.

ಅಂಕಿತಾ ಸದರ್​ ಬ್ಲಾಕ್​ನ ಆದರ್ಶ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ. ಆಕೆ 21 ರ ಮಗ್ಗಿಯನ್ನೂ ಸಹ ತಪ್ಪಿಲ್ಲದೇ ಪಠಿಸಲು ಸಮರ್ಥಳು.

ಆಕೆಯ ಮುಖ್ಯೋಪಾಧ್ಯಾಯ ಶತ್ರುಘ್ನ ಮಣಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಪೋಷಕರು ಸರಿಯಾಗಿ ಬೆಂಬಲಿಸಿದರೆ ಎಲ್ಲಾ ಮಕ್ಕಳು ಶೈಕ್ಷಣಿಕ ಉತ್ಕೃಷ್ಟತೆಯನ್ನು ಮುಟ್ಟಬಹುದು ಎಂದು ತಿಳಿಸಿದ್ದಾರೆ.

ಅಂಕಿತಾ ಅಧ್ಯಯನ ಮಾಡುವ ಶಾಲೆಯಲ್ಲಿ ಅವರು ಏಕೆೈಕ ಶಿಕ್ಷಕರಾಗಿದ್ದಾರೆ ಮತ್ತು ಕೆಲವೊಮ್ಮೆ ಶಿಕ್ಷಾಮಿತ್ರರಿಂದ ಸಹಾಯ ಪಡೆಯುತ್ತಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments