72 ವರ್ಷದ ವೃದ್ದನ ಮನೆಯಲ್ಲಿತ್ತು ಮಕ್ಕಳ ಲಕ್ಷಕ್ಕೂ ಅಧಿಕ ಅಶ್ಲೀಲ ಫೋಟೋ
ಮಕ್ಕಳ ಅಶ್ಲೀಲತೆಯ ಮುದ್ರಿತ ಚಿತ್ರಗಳನ್ನು ಸಂಗ್ರಹಿಸಿದ್ದ 72 ವರ್ಷದ ಫ್ಲೋರಿಡಾ ಅಜ್ಜನನ್ನು ಬಂಧಿಸಲಾಗಿದೆ. ಈತನ ಬಳಿ 2.2 ಲಕ್ಷಕ್ಕಿಂತ ಹೆಚ್ಚಿನ ಚಿತ್ರಗಳ ಮುದ್ರಿತ ವಸ್ತುಗಳು ಸಿಕ್ಕಿವೆ. ಇವು ಒಂದು ಟನ್ ತೂಕವನ್ನು ಹೊಂದಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ಹೆಸರು ಪಾಲ್ ಜಿಟ್ಟೆಲ್. ಈತನ ಮನೆಯ ತುಂಬಾ ಮಕ್ಕಳ ಅಶ್ಲೀಲ ಚಿತ್ರಗಳೇ ಕಾಣಿಸುತ್ತವೆ. ಮುದ್ರಿತ ಚಿತ್ರಗಳನ್ನು ತನ್ನ ಕಚೇರಿ ಮತ್ತು ಮಲಗುವ ಕೋಣೆಯ ಉದ್ದಕ್ಕೂ ಪೆಟ್ಟಿಗೆಗಳಲ್ಲಿ ಜೋಡಿಸಿಕೊಂಡಿದ್ದ ಎಂದು ಮರಿಯನ್ ಕೌಂಟಿ ಶೆರಿಫ್ ಕಚೇರಿ ಬಹಿರಂಗಪಡಿಸಿದೆ.
ಜಿಟ್ಟೆಲ್ ಅವರನ್ನು ಫೆಬ್ರವರಿ 23 ರಂದು ಅಧಿಕಾರಿಗಳು ಬಂಧಿಸಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತೋರಿಸುವ ಹಲವಾರು ಫೈಲ್‌ಗಳನ್ನು ಅಂತರ್ಜಾಲಕ್ಕೆ ಈತ ಅಪ್‌ಲೋಡ್ ಕೂಡ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಐಪಿ ವಿಳಾಸವನ್ನು ಟ್ರ್ಯಾಕ್ ಮಾಡಿದಾಗ, ಅಜ್ಜ ಸಿಕ್ಕಿಬಿದ್ದಿದ್ದಾನೆ. ಆರೋಪಿ ಮನೆಯಿಂದ ಮುದ್ರಿತ ವಸ್ತುಗಳ ಜೊತೆಗೆ ಡಿಜಿಟಲ್ ಸಂಗ್ರಹಣೆ ಮತ್ತು ಕಂಪ್ಯೂಟರ್ ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.