Monday, December 5, 2022
Google search engine
HomeUncategorized3.7 ಕೋಟಿ ರೂ. ಐಷಾರಾಮಿ ಬಂಗಲೆ ಕೇವಲ 277 ರೂಪಾಯಿಗೆ ಲಭ್ಯ…! ಇದರಲ್ಲಿದೆ ಒಂದು ಟ್ವಿಸ್ಟ್

3.7 ಕೋಟಿ ರೂ. ಐಷಾರಾಮಿ ಬಂಗಲೆ ಕೇವಲ 277 ರೂಪಾಯಿಗೆ ಲಭ್ಯ…! ಇದರಲ್ಲಿದೆ ಒಂದು ಟ್ವಿಸ್ಟ್

3.7 ಕೋಟಿ ರೂ. ಐಷಾರಾಮಿ ಬಂಗಲೆ ಕೇವಲ 277 ರೂಪಾಯಿಗೆ ಲಭ್ಯ…! ಇದರಲ್ಲಿದೆ ಒಂದು ಟ್ವಿಸ್ಟ್

ಲಂಡನ್​: ಅದೃಷ್ಟ ಯಾರಿಗೆ, ಹೇಗೆ, ಯಾವ ಸಮಯದಲ್ಲಿ ಲಭಿಸುತ್ತದೆ ಎಂದು ಹೇಳುವುದು ಕಷ್ಟ.‌ ಲಾಟರಿಯಿಂದಾಗಿ ಕಡು ಬಡವನು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಈಗ ಸುಮಾರು 3.7 ಕೋಟಿ ರೂ. ಬೆಲೆ ಬಾಳುವ ನಾಲ್ಕು ಬೆಡ್​ರೂಮ್​ ಮನೆಯನ್ನು 227 ರೂಪಾಯಿಗೆ ನೀಡಲು ಸಹೋದರರಿಬ್ಬರು ತಯಾರಿ ನಡೆಸಿದ್ದಾರೆ.

ಇಂಗ್ಲೆಂಡ್​ನ ಕೆಂಟ್‌ನ ಮೆಡ್ವೇಯ ಪ್ರದೇಶದ ಸಹೋದರರಾದ ಜೇಸನ್ ಮತ್ತು ವಿಲ್ ಇಂಥದ್ದೊಂದು ಆಫರ್​ ನೀಡಿದ್ದಾರೆ. ಒಬ್ಬ ಅದೃಷ್ಟವಂತ ವ್ಯಕ್ತಿಗೆ £400,000ನ ಮನೆಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಉಳಿದುಕೊಳ್ಳಲು ನೀಡಲು ಅವರು ಸಿದ್ಧರಾಗಿದ್ದಾರೆ. ಒಬ್ಬ ಅದೃಷ್ಟಶಾಲಿ ವಿಜೇತರಿಗೆ ಆಧುನಿಕ ಸೌಕರ್ಯಗಳು ಇರುವ ಈ ವಿಶಾಲವಾದ ಮನೆಯಲ್ಲಿ ಇರಲು ಅವಕಾಶ ನೀಡುತ್ತಿರುವುದಾಗಿ ಹೇಳಿದ್ದಾರೆ.

ರಾಜಮನೆತನದ ಆಸ್ತಿಯಾಗಿರುವ ಈ ಬಂಗಲೆಯಲ್ಲಿ ಮೂರು ಮಹಡಿಗಳು ಇವೆ. ನಾಲ್ಕು ದೊಡ್ಡ ಮಲಗುವ ಕೋಣೆಗಳು, ಐಷಾರಾಮಿ ಈಟ್-ಇನ್ ಕಿಚನ್ ಮತ್ತು ಡೈನರ್, ಸುಂದರವಾದ ಲಿವಿಂಗ್ ರೂಮ್ ಮತ್ತು ಸುಂದರ ಉದ್ಯಾನವನಗಳಿವೆ. ಸುಂದರ ಆಲಂಕಾರಿಕ ವಸ್ತುಗಳಿಂದ ಮನೆಯನ್ನು ಡೆಕೋರೇಟ್​ ಮಾಡಲಾಗಿದೆ. ಗಾಳಿಯಾಡುವ ಕಿಟಕಿಗಳು ಮತ್ತು ವಿಶಾಲವಾದ ನೆಲದ ಹಾಸುಗಳನ್ನು ಇದು ಹೊಂದಿದೆ.

ಈಗ ಇದರಲ್ಲಿ ವಾಸಿಸುವ ಅದೃಷ್ಟ ಯಾರಿಗೆ ಇದೆ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು. ಈ ಮನೆಯನ್ನು ತಮ್ಮದಾಗಿಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಆಯ್ದ ಒಂದು ಕುಟುಂಬಕ್ಕೆ ಈ ಅವಕಾಶ ನೀಡುವುದಾಗಿ ಸಹೋದರರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments