Saturday, April 1, 2023
Google search engine
HomeUncategorized3 ವರ್ಷಗಳ ನಂತರ ‘ಟೆಸ್ಟ್’ನಲ್ಲಿ ಶತಕ: ಒಟ್ಟಾರೆ ವಿರಾಟ್ ಕೊಹ್ಲಿ ಗಳಿಸಿದ ಶತಕಗಳೆಷ್ಟು ಗೊತ್ತಾ…?

3 ವರ್ಷಗಳ ನಂತರ ‘ಟೆಸ್ಟ್’ನಲ್ಲಿ ಶತಕ: ಒಟ್ಟಾರೆ ವಿರಾಟ್ ಕೊಹ್ಲಿ ಗಳಿಸಿದ ಶತಕಗಳೆಷ್ಟು ಗೊತ್ತಾ…?

3 ವರ್ಷಗಳ ನಂತರ ‘ಟೆಸ್ಟ್’ನಲ್ಲಿ ಶತಕ: ಒಟ್ಟಾರೆ ವಿರಾಟ್ ಕೊಹ್ಲಿ ಗಳಿಸಿದ ಶತಕಗಳೆಷ್ಟು ಗೊತ್ತಾ…?

ಅಹಮದಾಬಾದ್: ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ ನಲ್ಲಿ ಅದ್ಭುತ ಶತಕ ಸಿಡಿಸುವ ಮೂಲಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾನುವಾರ ತಮ್ಮ ಟೆಸ್ಟ್ ಶತಕದ ಬರವನ್ನು ಕೊನೆಗೊಳಿಸಿದರು.

ಟೆಸ್ಟ್ ಪಂದ್ಯದ ನಾಲ್ಕನೇ ದಿನವನ್ನು 59 ರನ್‌ಗಳಿಂದ ಆರಂಭಿಸಿದ 34 ವರ್ಷದ ಕ್ರಿಕೆಟಿಗ, 241 ಎಸೆತಗಳಲ್ಲಿ ತಮ್ಮ 28 ನೇ ಟೆಸ್ಟ್ ಶತಕವನ್ನು ತಲುಪಿದರು.

2019ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಟೆಸ್ಟ್ ಶತಕ ಬಾರಿಸಿದ್ದರು.

ಶನಿವಾರ, ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್‌ರನ್ನು ಸೇರಿಕೊಂಡು ತವರಿನಲ್ಲಿ 4000 ಟೆಸ್ಟ್ ರನ್ ಗಳಿಸಿದ ಐದನೇ ಭಾರತೀಯರಾದರು.

3 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಶತಕ – ಪ್ರಮುಖ ಅಂಕಿಅಂಶ

ವಿರಾಟ್ ಕೊಹ್ಲಿ ಭಾನುವಾರ ತಮ್ಮ ಸುದೀರ್ಘ ಟೆಸ್ಟ್ ಶತಕದ ಬರ ಕೊನೆಗೊಳಿಸಿದರು. ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ ನಲ್ಲಿ ವೈಯಕ್ತಿಕ ನೂರು ಮೈಲಿಗಲ್ಲನ್ನು ತಲುಪಿ ಅವರ 28ನೇ ಟೆಸ್ಟ್ ಶತಕ ದಾಖಲಿಸಿದರು. ಅವರ ಕೊನೆಯ ಟೆಸ್ಟ್ ಶತಕವು 2019 ರ ನವೆಂಬರ್‌ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶ ವಿರುದ್ಧವಾಗಿತ್ತು.

28 ನೇ ಟೆಸ್ಟ್ ಶತಕ ಪೂರ್ಣಗೊಳಿಸಿದ ಕೊಹ್ಲಿ; ಕೆಲವು ಪ್ರಮುಖ ಅಂಕಿಅಂಶಗಳ ನೋಟ

ವಿವಿಧ ತಂಡಗಳ ವಿರುದ್ಧ ಅತಿಹೆಚ್ಚು ಶತಕ

20 ಸಚಿನ್ ತೆಂಡೂಲ್ಕರ್ -ಆಸ್ಟ್ರೇಲಿಯಾ ವಿರುದ್ಧ

19 ಡಾನ್ ಬ್ರಾಡ್ಮನ್ –ಇಂಗ್ಲೆಂಡ್ ವಿರುದ್ಧ

17 ಸಚಿನ್ ತೆಂಡೂಲ್ಕರ್ –ಶ್ರೀಲಂಕಾ ವಿರುದ್ಧ

16 ವಿರಾಟ್ ಕೊಹ್ಲಿ – ಆಸ್ಟ್ರೇಲಿಯಾ ವಿರುದ್ಧ

16 ವಿರಾಟ್ ಕೊಹ್ಲಿ –ಶ್ರೀಲಂಕಾ ವಿರುದ್ಧ

ಎದುರಿಸಿದ ಎಸೆತಗಳಲ್ಲಿ ಕೊಹ್ಲಿ ನಿಧಾನಗತಿಯ ಟೆಸ್ಟ್ 100

289 ಎಸೆತ ಇಂಗ್ಲೆಂಡ್ ವಿರುದ್ಧ, ನಾಗ್ಪುರ 2012

241 ಆಸ್ಟ್ರೇಲಿಯಾ ವಿರುದ್ಧ ,ಅಹಮದಾಬಾದ್ 2023

214 ಆಸ್ಟ್ರೇಲಿಯಾ ವಿರುದ್ಧ, ಪರ್ತ್ 2018

199 ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್ 2012

199 ಆಸ್ಟ್ರೇಲಿಯಾ ವಿರುದ್ಧ, ಚೆನ್ನೈ 2013

ಶತಕ ಗಳಿಕೆಯಲ್ಲಿ ಕೊಹ್ಲಿ ಅತಿ ಹೆಚ್ಚು ಇನ್ನಿಂಗ್ಸ್ ಅಂತರ

27ನೇ ಮತ್ತು 28ನೇ ಶತಕದ ನಡುವೆ 41 ಇನ್ನಿಂಗ್ಸ್

11ನೇ ಮತ್ತು 12ನೇ ಶತಕದ ನಡುವೆ 11 ಇನಿಂಗ್ಸ್‌

6ನೇ ಮತ್ತು 7ನೇ ಶತಕದ ನಡುವೆ 10 ಇನಿಂಗ್ಸ್‌

25 ಮತ್ತು 26 ನೇ ಶತಕದ ನಡುವೆ 10 ಇನ್ನಿಂಗ್ಸ್

ವಿರಾಟ್ ಕೊಹ್ಲಿ ಟೆಸ್ಟ್ ನಲ್ಲಿ 28, ಏಕದಿನ 46, ಟಿ20 ಯಲ್ಲಿ 1 ಸೇರಿ ಒಟ್ಟಾರೆ 75 ಅಂತರರಾಷ್ಟ್ರೀಯ ಶತಕ ಸಿಡಿಸಿದ್ದಾರೆ. ಐಪಿಎಲ್ ನಲ್ಲಿ ಅವರು 5 ಶತಕ ಗಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments