ಹೋಳಿ ಹಬ್ಬಕ್ಕೆ ಕರ್ಜಿಕಾಯಿ ತಯಾರಿಸಿ ಶುಭ ಕೋರಿದ ದಕ್ಷಿಣ ಕೊರಿಯಾ ಬಾಣಸಿಗ

ದಕ್ಷಿಣ ಕೊರಿಯಾದ ಬಾಣಸಿಗರೊಬ್ಬರು ತಮ್ಮ ಅನುಯಾಯಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರುತ್ತಿರುವ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ.
ವಿಶೇಷವೆಂದರೆ ವಿಡಿಯೋದಲ್ಲಿ ಅವರು ಹೋಳಿ ಹಬ್ಬ ಆಚರಿಸಲು ಗುಜಿಯಾ( ಕರ್ಜಿಕಾಯಿ) ತಯಾರಿ ಮಾಡಿದ್ದರು. ಅದರ ತಯಾರಿಕೆಯ ಪ್ರತಿ ಹಂತಗಳನ್ನು ವಿಡಿಯೋ ಮಾಡಿ ಹೋಳಿ ಹಬ್ಬಕ್ಕೆ ಶುಭ ಕೋರಿದ್ದಾರೆ. ಅದರ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಅವರಿಗೆ ಹಬ್ಬದ ಶುಭ ಕೋರುತ್ತಾ ಗುಜಿಯಾ ತಯಾರಿಕೆಯನ್ನ ಮೆಚ್ಚಿಕೊಂಡಿದ್ದಾರೆ.