ಹೋಳಿ ಆಚರಣೆ ವೇಳೆ ಹೊಡೆದಾಟ; ಯುವಕನಿಗೆ ಗಂಭೀರ ಗಾಯ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಸಾಕಿ ನಾಕಾದ ಜಾರಿ ಮಾರಿ ಮಂದಿರದ ಬಳಿ ಗುಂಪೊಂದು ಫೈಜಾನ್ ಎಂಬ ಹುಡುಗನನ್ನು ಥಳಿಸಿದೆ ಎಂದು ಆರೋಪಿಸಲಾಗಿದೆ.
ಹೋಳಿ ಆಚರಿಸುತ್ತಿದ್ದ ವ್ಯಕ್ತಿಗಳ ಗುಂಪೊಂದು ಯುವಕನನ್ನು ದೊಣ್ಣೆಗಳಿಂದ ಥಳಿಸಿದೆ. ಇದರಿಂದ ಯುವಕನಿಗೆ ಗಂಭೀರ ಗಾಯಗಳಾಗಿರೋದು ದೃಶ್ಯಾವಳಿಗಳಲ್ಲಿ ಕಾಣಬಹುದು.
ಹಲ್ಲೆಯ ನಂತರ ಸಂತ್ರಸ್ತನನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 307 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಯತ್ನದ ಕುರಿತು ಎಫ್‌ಐಆರ್ ದಾಖಲಾಗಿದ್ದು, ಸಕಿನಾಕಾ ಪೊಲೀಸ್ ಠಾಣೆ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ.