ಹೋಳಿ ಆಚರಣೆಯಲ್ಲಿ ಟೀಂ ಇಂಡಿಯಾ; ಹೀಗಿತ್ತು ವಿರಾಟ್ ಕೊಹ್ಲಿ ಸಂಭ್ರಮ

ಭಾರತದ ಓಪನರ್ ಶುಭಮನ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ಬಾಲಿವುಡ್ ಹಾಡು ಹಿನ್ನಲೆಯಲ್ಲಿ ಕೇಳಿಬರುತ್ತಿದ್ದು ಅದಕ್ಕೆ ಕೊಹ್ಲಿ ಮೈಕುಣಿಸಿದ್ದಾರೆ.
ಭಾರತೀಯ ಟೆಸ್ಟ್ ತಂಡದ ಇತರ ಸದಸ್ಯರು ಈ ವೇಳೆ ಸಂಭ್ರಮಾಚರಣೆಯನ್ನ ಆನಂದಿಸುತ್ತಿರುವುದನ್ನು ಕಾಣಬಹುದು.
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ಗೆ ಟೀಂ ಇಂಡಿಯಾ ತಯಾರಿ ನಡೆಸುತ್ತಿದೆ. ಈ ವೇಳೆ ಸ್ವಲ್ಪ ಸಮಯ ತೆಗೆದುಕೊಂಡು ಬಸ್ ನಲ್ಲಿ ಹೋಳಿ ಆಚರಿಸಿದೆ.