Wednesday, August 17, 2022
Google search engine
HomeUncategorized‘ಹೇ…… ಫ್ರಮ್​ ಟೀಮ್​ ಇಂಡಿಯಾ’ ರೀಲ್ಸ್ ನಲ್ಲಿ ರಾಹುಲ್​ ದ್ರಾವಿಡ್​

‘ಹೇ…… ಫ್ರಮ್​ ಟೀಮ್​ ಇಂಡಿಯಾ’ ರೀಲ್ಸ್ ನಲ್ಲಿ ರಾಹುಲ್​ ದ್ರಾವಿಡ್​

‘ಹೇ…… ಫ್ರಮ್​ ಟೀಮ್​ ಇಂಡಿಯಾ’ ರೀಲ್ಸ್ ನಲ್ಲಿ ರಾಹುಲ್​ ದ್ರಾವಿಡ್​

ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಕ್ರಿಕೆಟ್​ ತಂಡದ “ಹೇ……’ ವಿಡಿಯೋ ಸಂಚಲನ ಸೃಷ್ಟಿಸಿದೆ.

ಕ್ರಿಕೆಟರ್​ಗಳು ಆಗಾಗ್ಗೆ ವಿಡಿಯೋಗಳನ್ನು ಮಾಡಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಶಿಖರ್​ ಧವನ್​ ಹಂಚಿಕೊಂಡ ವಿಡಿಯೋದಲ್ಲಿ ಹಲವು ಕ್ರಿಕೆಟರ್​ಗಳು ಕೋಚ್​ ದ್ರಾವಿಡ್​ ಜತೆ ಸಣ್ಣದೊಂದು ಮಸ್ತಿ ಮಾಡುವುದು ಕಾಣಿಸುತ್ತದೆ.

ಕ್ರೀಡಾಂಗಣದ ಕೊಠಡಿಯಿಂದ ಒಬ್ಬೊಬ್ಬರಾಗಿ ಹೊರಬರುತ್ತಾ ಹೇ….. ಎಂದು ಕೈ ತೋರಿಸುವುದನ್ನು ಕಾಣಬಹುದು. ಅಚ್ಚರಿ ಎಂದರೆ ಕೋಚ್​ ದ್ರಾವಿಡ್​ ಕೂಡ ಕ್ರೀಡಾಪಟುಗಳನ್ನು ಅನುಸರಿಸಿ ಹೇ ಎಂದು ಹೆಜ್ಜೆ ಹಾಕುವುದು ಕ್ರಿಕೆಟ್​ ಪ್ರೇಮಿಗಳನ್ನು ಅಚ್ಚರಿಗೆ ತಳ್ಳಿದೆ.

ಶಿಖರ್​ ಧವನ್​ ಇನ್​ಸ್ಟಾ ಖಾತೆಯಲ್ಲಿ ಒಂದೇ ದಿನಕ್ಕೆ ಒಂಬತ್ತೂವರೆ ಲಕ್ಷಕ್ಕಿಂತ ಹೆಚ್ಚು ಲೈಕ್​ ಪಡೆದುಕೊಂಡಿದೆ. ಸಾವಿರಾರು ಕಾಮೆಂಟ್​ ಬಂದಿದೆ. ಒಬ್ಬರಂತೂ “ಇಂದಿರಾ ನಗರ್ ಕಾ ಗೂಂಡಾ” ಎಂದು ರಾಹುಲ್​ ಅವರನ್ನು ಹಾಸ್ಯ ಮಾಡಿದ್ದಾರೆ. ರಾಹುಲ್​ ದ್ರಾವಿಡ್​ ಕ್ರೆಡಿಟ್​ ಕಾರ್ಡ್​ಗಾಗಿ ಇಂದಿರಾ ನಗರ್ ಕಾ ಗೂಂಡಾ ಎಂದು ಹೇಳುವ ಪಾತ್ರದಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದರು.

ಶಿಖರ್​ ಹಂಚಿಕೊಂಡ ವಿಡಿಯೋಗೆ, “ಹಹಹಹಹ ಏಕ್​ ನಂಬರ್​” ಎಂದು ನಟ ರಣವೀರ್​ ಸಿಂಗ್​ ಅವರು ತಮ್ಮ ಥಂಬ್ಸ್​ ಅಪ್​ ನೀಡಿದ್ದಾರೆ. ‘ಶಿಖರ್​ ಮಾತ್ರ ಈ ಸಾಹಸಗಳನ್ನು ಮಾಡಬಲ್ಲರು’ ಎಂದು ದಿನೇಶ್​ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ. ದ್ರಾವಿಡ್​ ಅವರ ‘ಅನಿರೀಕ್ಷಿತ’ ಹೇ ನೋಡಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಫಾರ್ಮ್‌ ನಲ್ಲಿಲ್ಲದೇ ಇದ್ರೂ ಅಭಿಮಾನಿಗಳ ಪಾಲಿಗೆ ಕಿಂಗ್, ಪ್ರತಿ ಇನ್‌ಸ್ಟಾ ಪೋಸ್ಟ್‌ಗೆ 8 ಕೋಟಿ ಗಳಿಸ್ತಾರೆ ಕೊಹ್ಲಿ

ಭಾರತವು ಜುಲೈ 22 ರಂದು ವೆಸ್ಟ್​ ಇಂಡೀಸ್​ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ, ಜಸ್ಪ್ರೀತ್​ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ರಿಷಬ್​ ಪಂತ್​ ಸೇರಿದಂತೆ ಇತರ ಆಟಗಾರರು ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದು, ಧವನ್​ ಮುನ್ನಡೆಸಲಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್​ ಪುನರಾಗಮನ ಮಾಡಲಿದ್ದರೆ, ಕೊಹ್ಲಿ ಮತ್ತು ಬುಮ್ರಾ ವಿಶ್ರಾಂತಿಯಲ್ಲಿದ್ದಾರೆ. ಜುಲೈ 29 ಮತ್ತು ಆಗಸ್ಟ್​ 7ರ ನಡುವೆ ಟಿ20 ಸರಣಿ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments