Saturday, November 26, 2022
Google search engine
HomeUncategorizedಹುಲಿ ಮರಿಗಳು ಅಪ್ಪಿ ಮುದ್ದಾಡುತ್ತಿರೋ ಮಹಿಳೆ: ನೋಡುಗರ ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಹುಲಿ ಮರಿಗಳು ಅಪ್ಪಿ ಮುದ್ದಾಡುತ್ತಿರೋ ಮಹಿಳೆ: ನೋಡುಗರ ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಹುಲಿ ಮರಿಗಳು ಅಪ್ಪಿ ಮುದ್ದಾಡುತ್ತಿರೋ ಮಹಿಳೆ: ನೋಡುಗರ ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಪ್ರಾಣಿ ಮತ್ತು ಮನುಷ್ಯರ ಸಂಬಂಧ ಕುತೂಹಲಕಾರಿಯಾದದ್ದು. ಪ್ರಾಣಿಗಳು ಸಾಕುಪ್ರಾಣಿಗಳೇ ಆಗಿರಬೇಕೆಂದೇನು ಇಲ್ಲ, ವನ್ಯಜೀವಿಗಳೂ ತಮ್ಮ ಮಾಲೀಕರ ಮೇಲೆ ಅಷ್ಟೇ ಪ್ರೀತಿ, ಸಲುಗೆ ಹೊಂದಿರುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹುಲಿ ಎಂದರೆ ಸಾಕು ಕನಸಿನಲ್ಲಿಯೂ ಬೆಚ್ಚಿಬೀಳುವವರೇ ಎಲ್ಲರು. ಆದರೆ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹುಲಿ ಮರಿಗಳಿಗೆ ಚುಂಬಿಸುತ್ತ ಅದರ ಜತೆ ಆಟವಾಡುತ್ತಿರುವ ದೃಶ್ಯವಿದೆ. ಮಹಿಳೆ ಈ ಹುಲಿಗಳು ತನ್ನ ಮಕ್ಕಳೋ ಎಂಬಂತೆ ಮುತ್ತುಕೊಡುತ್ತಾ ಅದಕ್ಕೆ ಪ್ರೀತಿ ಮಾಡುತ್ತಿದ್ದಾಳೆ. ನಾಯಿ, ಬೆಕ್ಕುಗಳಿಗೆ ಮಾಲೀಕರು ಪ್ರೀತಿಸುವಂತೆಯೇ ಈಕೆ ಹುಲಿಗಳನ್ನು ಮುದ್ದಾಡುತ್ತಿದ್ದಾಳೆ.

@tiger-tiger678 ಹೆಸರಿನ ಬಳಕೆದಾರರು ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು ಇದಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿ, ಥರೇವಾರಿ ಕಮೆಂಟ್​ ಮಾಡಿದ್ದಾರೆ. ಪ್ರಾಣಿಗಳು ಮನುಷ್ಯರಂತೆ ಕ್ರೂರಿಗಳಲ್ಲ. ಅವುಗಳಿಗೆ ಪ್ರೀತಿ ಮಾಡಿದರೆ, ಅವು ಕೂಡ ಪ್ರೀತಿಯೇ ತೋರುತ್ತವೆ. ತಮಗೆ ಹಿಂಸೆ ಮಾಡಿದರೆ ಮಾತ್ರ ಅವು ಕ್ರೂರಿಯಾಗುತ್ತವೆ ಎನ್ನುವುದಕ್ಕೆ ಈ ವಿಡಿಯೋ ಉದಾಹರಣೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments