Saturday, November 26, 2022
Google search engine
HomeUncategorizedಹಿಮಪಾತದ ನಡುವೆ ಮಾದಕವಾಗಿ ನರ್ತಿಸಿದ ಯುವತಿ: ವಿಡಿಯೋ ವೈರಲ್​

ಹಿಮಪಾತದ ನಡುವೆ ಮಾದಕವಾಗಿ ನರ್ತಿಸಿದ ಯುವತಿ: ವಿಡಿಯೋ ವೈರಲ್​

ಹಿಮಪಾತದ ನಡುವೆ ಮಾದಕವಾಗಿ ನರ್ತಿಸಿದ ಯುವತಿ: ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣಗಳು ಎಲ್ಲರ ಜೀವನದ ಭಾಗ ಆಗುತ್ತಿದ್ದಂತೆಯೇ ಎಲ್ಲರಿಗೂ ಪ್ರಸಿದ್ಧಿಗೆ ಬರುವ ಹಂಬಲ. ಇದಕ್ಕೆ ದಾರಿ ಮಾಡಿಕೊಟ್ಟಿರುವುದು ರೀಲ್ಸ್​. ರೀಲ್ಸ್ ​ಮಾಡುವವರ ಸಂಖ್ಯೆ ಹೆಚ್ಚಿದಂತೆ ಅದರಲ್ಲಿಯೂ ಪೈಪೋಟಿಗೆ ಬೀಳುತ್ತಿದ್ದಾರೆ. ಹೆಚ್ಚಿನ ಪ್ರಸಿದ್ಧ ಪಡೆಯಲು ಅರೆಬರೆ ಡ್ರೆಸ್​ ಹಾಕಿಕೊಳ್ಳುವುದು, ಮಾದಕ ಡ್ರೆಸ್​ ಧರಿಸಿ ನರ್ತಿಸುವುದು ಇಂಥವರ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ನೆಟ್ಟಿಗರು ಕೂಡ ಫಿದಾ ಆಗುತ್ತಿದ್ದಾರೆ.

ಅಂಥದ್ದೇ ಒಂದು ರೊಮ್ಯಾಂಟಿಕ್​ ನರ್ತನ ಇದೀಗ ವೈರಲ್​ ಆಗಿದೆ. ದೇಸಿ ಯುವತಿಯೊಬ್ಬರು ಹಿಮದಲ್ಲಿ ಬಾಲಿವುಡ್ ಸಿನಿಮಾ ಒಂದರ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಇದಾಗಿದೆ. ಕೊರೆಯುವ ಚಳಿಯಲ್ಲಿ ನರ್ತಿಸುವ ಕನಸನ್ನು ಈಕೆ ಈಡೇರಿಸಿಕೊಂಡಿದ್ದಾರೆ.

ಚಮ್ಮಕ್ ಚಲೋ ಕರೀನಾ ಕಪೂರ್ ಅವರ ಅತ್ಯಂತ ಸಾಂಪ್ರದಾಯಿಕ ಹಾಡುಗಳಲ್ಲಿ ಒಂದಾಗಿದೆ, ಪ್ರತಿಯೊಬ್ಬ ಬಾಲಿವುಡ್ ಅಭಿಮಾನಿಗಳು ತಮ್ಮ ಜೀವನದಲ್ಲಿ ಈ ಹಾಡಿಗೆ ಸ್ಟೆಪ್​ ಹಾಕಿದವರೇ. ಹೆಚ್ಚಿನ ಜನರು ಅದರ ನೃತ್ಯ ಸಂಯೋಜನೆಗೆ ಮನ ಸೋತಿದ್ದಾರೆ. ಈ ವೈರಲ್​ ವಿಡಿಯೋದಲ್ಲಿನ ಮಹಿಳೆ ಕೂಡ ಕೆಂಪು ಲೆಹಂಗಾದಲ್ಲಿ ಮಾದಕವಾಗಿ ಈ ಹಾಡಿಗೆ ನರ್ತಿಸಿದ್ದಾರೆ. ಕೆನಡಾದಲ್ಲಿ ಋತುವಿನ ಮೊದಲ ಹಿಮಪಾತದಲ್ಲಿ ಹಿಮದಿಂದ ಆವೃತವಾದ ಮನೆಗಳ ಹೊರಗೆ ನರ್ತಿಸುತ್ತಿರುವುದಾಗಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments