Saturday, September 24, 2022
Google search engine
HomeUncategorizedಹಾಸ್ಟೆಲ್‌ ಕೋಣೆಯಲ್ಲೇ ಸಾವಿಗೆ ಶರಣಾದ ಎಂಬಿಬಿಎಸ್‌ ವಿದ್ಯಾರ್ಥಿನಿ; ಸ್ಥಳದಲ್ಲಿ ಸಿಕ್ಕಿದೆ ಡೆತ್‌ ನೋಟ್‌….!

ಹಾಸ್ಟೆಲ್‌ ಕೋಣೆಯಲ್ಲೇ ಸಾವಿಗೆ ಶರಣಾದ ಎಂಬಿಬಿಎಸ್‌ ವಿದ್ಯಾರ್ಥಿನಿ; ಸ್ಥಳದಲ್ಲಿ ಸಿಕ್ಕಿದೆ ಡೆತ್‌ ನೋಟ್‌….!

ಹಾಸ್ಟೆಲ್‌ ಕೋಣೆಯಲ್ಲೇ ಸಾವಿಗೆ ಶರಣಾದ ಎಂಬಿಬಿಎಸ್‌ ವಿದ್ಯಾರ್ಥಿನಿ; ಸ್ಥಳದಲ್ಲಿ ಸಿಕ್ಕಿದೆ ಡೆತ್‌ ನೋಟ್‌….!

ದೆಹಲಿಯ ಸಫ್ದರ್‌ಗಂಜ್‌ ಆಸ್ಪತ್ರೆಯಲ್ಲಿ ಎಂಬಿಬಿಎಸ್‌ ಕೊನೆಯ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜಿನ ಹಾಸ್ಟೆಲ್‌ ಕೋಣೆಯಲ್ಲೇ ಸಾವಿಗೆ ಶರಣಾಗಿದ್ದಾಳೆ. 22 ವರ್ಷದ ಈ ಯುವತಿ ಡೆತ್‌ ನೋಟ್‌ ಸಹ ಬರೆದಿಟ್ಟಿದ್ದಾಳೆ. ತಾನು ಖಿನ್ನತೆಯಿಂದ ಬಳಲುತ್ತಿರುವುದಾಗಿ ಡೆತ್‌ ನೋಟ್‌ ನಲ್ಲಿ ಬರೆದಿದ್ದಾಳೆ. ವಿದ್ಯಾರ್ಥಿನಿಯ ಕೋಣೆಯಲ್ಲಿ ಡಿಪ್ರೆಶನ್‌ಗೆ ಸಂಬಂಧಿಸಿದ ಮಾತ್ರೆಗಳು ಸಹ ದೊರೆತಿವೆ.

ಬೆಳಗಿನ ಜಾವ 3.30ರವೇಳೆಗೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನಿಯೋಜಿಸಲಾದ ಪೊಲೀಸರಿಗೆ ಕರೆ ಬಂದಿತ್ತು. ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಯ ತುರ್ತು ವಾರ್ಡ್‌ಗೆ ಕರೆದೊಯ್ಯಲಾಯ್ತು.

ಆದ್ರೆ ಅಷ್ಟರಲ್ಲಾಗಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ವಿದ್ಯಾರ್ಥಿಯ ಕೊಠಡಿಯಲ್ಲಿ ಖಿನ್ನತೆ ನಿವಾರಕ ಮೆಡಿಸಿನ್‌ಗಳ ಎರಡು ಖಾಲಿ ಪ್ಯಾಕೆಟ್‌ಗಳೂ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿನಿಯ ಸ್ನೇಹಿತರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಕುಟುಂಬಸ್ಥರು ಕೂಡ ಸ್ಥಳಕ್ಕೆ ಆಗಮಿಸಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿನಿ 2022ರ ಏಪ್ರಿಲ್‌ನಿಂದ ಸಫ್ದರ್‌ಗಂಜ್‌ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಳು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments