Thursday, August 11, 2022
Google search engine
HomeUncategorizedಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ದರದಲ್ಲಿ ಭಾರಿ ಏರಿಕೆ

ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ದರದಲ್ಲಿ ಭಾರಿ ಏರಿಕೆ

ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ದರದಲ್ಲಿ ಭಾರಿ ಏರಿಕೆ

ಶ್ರಾವಣ ಆರಂಭದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಸಹ ಬರುತ್ತವೆ. ಈಗಾಗಲೇ ನಾಗರ ಪಂಚಮಿ ಆಚರಿಸಲಾಗಿದ್ದು, ಇಂದು ವರಮಹಾಲಕ್ಷ್ಮಿ ವ್ರತ ಇದೆ. ಇದಾದ ಬಳಿಕ ಗೌರಿ – ಗಣೇಶ, ದಸರಾ ದೀಪಾವಳಿ ಹಬ್ಬಗಳು ಬರಲಿದ್ದು, ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕೆಂದುಕೊಂಡಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.

ಗುರುವಾರದಂದು ರಾಷ್ಟ್ರ ರಾಜಧಾನಿ ನವದೆಹಲಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 487 ರೂಪಾಯಿ ಏರುವುದರ ಮೂಲಕ 52,566 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಸಹ ಪ್ರತಿ ಕೆಜಿಗೆ 426 ರೂ. ಏರಿಕೆ ಕಂಡು 58,806 ರೂಪಾಯಿ ಮುಟ್ಟಿದೆ.

ಚಿನ್ನ – ಬೆಳ್ಳಿ ಬೆಲೆ ಏರಿಕೆಯು ಅಂತರಾಷ್ಟ್ರೀಯ ಮಾರುಕಟ್ಟೆ ಬೆಳವಣಿಗೆಗಳಿಗೆ ಅನುಗುಣವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments