Friday, October 7, 2022
Google search engine
HomeUncategorizedಹಠಾತ್​ ಪ್ರವಾಹದಲ್ಲಿ ಈಜಲು ಸಿಂಹದ ಹೆಣಗಾಟ; ವಿಡಿಯೋ ವೈರಲ್

ಹಠಾತ್​ ಪ್ರವಾಹದಲ್ಲಿ ಈಜಲು ಸಿಂಹದ ಹೆಣಗಾಟ; ವಿಡಿಯೋ ವೈರಲ್

ಹಠಾತ್​ ಪ್ರವಾಹದಲ್ಲಿ ಈಜಲು ಸಿಂಹದ ಹೆಣಗಾಟ; ವಿಡಿಯೋ ವೈರಲ್

ಪ್ರಕೃತಿಯ ವೈಪರೀತ್ಯ ಮನುಷ್ಯರಿಗಷ್ಟೇ ಅಲ್ಲ ಬಲಶಾಲಿ ಪ್ರಾಣಿಗಳನ್ನು ಸಹ ಕಾಡುತ್ತದೆ.‌ ಗುಜರಾತ್​ನ ಅಮ್ರೇಲಿಯಲ್ಲಿ ಜಲಾವೃತಗೊಂಡ ಅರಣ್ಯ ಪ್ರದೇಶದ ನಡುವೆ ಸಿಂಹವೊಂದು ಈಜಲು ಪ್ರಯತ್ನಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾಡಿನ ಮಾರ್ಗಗಳಲ್ಲಿ ನೀರು ಬಂದಿದೆ. ನೀರಿನಲ್ಲಿ ಸಿಕ್ಕಿಬಿದ್ದ ಸಿಂಹವು ಕಾಣಿಸಿಕೊಂಡಿದ್ದು, ನಂತರ ಪ್ರವಾಹ ಪರಿಸ್ಥಿತಿಯ ನಡುವೆ ನೀರಿನಲ್ಲಿ ತೇಲುತ್ತಿರುವುದನ್ನು ಕಾಣಬಹುದು. ಲಿಲಿಯಾ ತಿಬ್ದಿ ಭೋರಿಂಗಡ ರಸ್ತೆಯಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.

ಇದೇ ಘಟನೆಯ ಮತ್ತೊಂದು ವಿಡಿಯೋ ಸಿಂಹದ ದುಃಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸಿದೆ. ಜಲಾವೃತ ಪ್ರದೇಶದಲ್ಲಿ ಬಲಶಾಲಿ ಪ್ರಾಣಿ ಅಸಹಾಯಕವಾಗಿ ತೇಲುತ್ತಿರುವ ಕಂಡುಬಂದಿದೆ.

ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಗಳ ಪ್ರಕಾರ, ಗುಜರಾತ್ ನಲ್ಲಿ​ ನಿರಂತರ ಮಳೆಯಾಗುತ್ತಿದೆ. ಸೂರತ್​ ಮತ್ತು ಅಹಮದಾಬಾದ್​ನಂತಹ ನಗರಗಳು ಮಳೆಯ ಪ್ರವಾಹದಲ್ಲಿ ಮುಳುಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments