Sunday, April 2, 2023
Google search engine
HomeUncategorizedಸೋತು ಗೆದ್ದ ಸಚಿವ ತೇಮ್ಜೆನ್ ಇಮ್ನಾರಿಂದ ಕುತೂಹಲಕಾರಿ ಪೋಸ್ಟ್‌

ಸೋತು ಗೆದ್ದ ಸಚಿವ ತೇಮ್ಜೆನ್ ಇಮ್ನಾರಿಂದ ಕುತೂಹಲಕಾರಿ ಪೋಸ್ಟ್‌

ಸೋತು ಗೆದ್ದ ಸಚಿವ ತೇಮ್ಜೆನ್ ಇಮ್ನಾರಿಂದ ಕುತೂಹಲಕಾರಿ ಪೋಸ್ಟ್‌

ಮೊನ್ನೆ ನಡೆದ ಈಶಾನ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆಯ ಸಂದರ್ಭದಲ್ಲಿ ನಾಗಾಲ್ಯಾಂಡ್‌ನ ಅಲೋಂಗ್ಟಾಕಿ ಕ್ಷೇತ್ರದಿಂದ ತೇಮ್ಜೆನ್ ಇಮ್ನಾ ಅಲೋಂಗ್ ಕುತೂಹಲಕಾರಿ ಪೋಸ್ಟ್‌ ಒಂದನ್ನು ಶೇರ್‍ ಮಾಡಿಕೊಂಡಿದ್ದಾರೆ.

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವುದರಿಂದ ಇದು ತೀವ್ರ ಕುತೂಹಲ ಕೆರಳಿಸಿತ್ತು. ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅಲೋಂಗ್ಟಾಕಿ ಕ್ಷೇತ್ರದಿಂದ ತೇಮ್ಜೆನ್ ಇಮ್ನಾ ಅಲೋಂಗ್ ಗೆದ್ದಿದ್ದಾರೆ.

ಆದರೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟ ರಾಜ್ಯದಲ್ಲಿ ಪ್ರಬಲ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಕೆಲವು ಮತಗಳಿಂದ ಹಿನ್ನಡೆ ಸಾಧಿಸಿದ್ದರು. ನಂತರ ಅವರು ಭರ್ಜರಿ ಗೆಲುವು ಸಾಧಿಸಿದರು.

ತಾವು ಸೋತು ಗೆದ್ದವರು ಎಂಬ ಅರ್ಥ ಬರುವ ಪೋಸ್ಟ್‌ ಅವರು ಶೇರ್‌ ಮಾಡಿದ್ದಾರೆ. ಬಾಜಿಗರ್ ಚಿತ್ರದಲ್ಲಿ ಶಾರುಖ್ ಖಾನ್ ಅವರು ಹೇಳುವ ಹಾರ್‌ ಕೇ ಜೀತ್‌ ನೇ ವಾಲೇ ಕೋ…… ಡೈಲಾಗ್‌ ಬರೆದುಕೊಂಡಿರುವ ಸಚಿವರು ತಮ್ಮ ಗೆಲುವನ್ನು ಸಂಭ್ರಮಿಸಿದ್ದಾರೆ. ಪೋಸ್ಟ್ ಈಗಾಗಲೇ ಏಳು ಲಕ್ಷದಷ್ಟು ವೀಕ್ಷಣೆಗಳನ್ನು ಗಳಿಸಿದ್ದು, ಟನ್‌ಗಳಷ್ಟು ಅಭಿನಂದನಾ ಸಂದೇಶಗಳು ಬಂದಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments