Sunday, September 25, 2022
Google search engine
HomeUncategorizedಸೆಪ್ಟೆಂಬರ್ 1 ರಿಂದ ಪೂರ್ಣ ವೇತನ: ಉದ್ಯೋಗಿಗಳ ವೇತನ ಕಡಿತ ಕೈಬಿಟ್ಟ ಏರ್ ಇಂಡಿಯಾ

ಸೆಪ್ಟೆಂಬರ್ 1 ರಿಂದ ಪೂರ್ಣ ವೇತನ: ಉದ್ಯೋಗಿಗಳ ವೇತನ ಕಡಿತ ಕೈಬಿಟ್ಟ ಏರ್ ಇಂಡಿಯಾ

ಸೆಪ್ಟೆಂಬರ್ 1 ರಿಂದ ಪೂರ್ಣ ವೇತನ: ಉದ್ಯೋಗಿಗಳ ವೇತನ ಕಡಿತ ಕೈಬಿಟ್ಟ ಏರ್ ಇಂಡಿಯಾ

ನವದೆಹಲಿ: ಕೊರೋನಾ ಸಂದರ್ಭದಲ್ಲಿ ಉದ್ಯೋಗಿಗಳ ವೇತನ ಕಡಿತ ಮಾಡಿದ್ದ ಏರ್ ಇಂಡಿಯಾ ಸಂಸ್ಥೆ ಸೆಪ್ಟೆಂಬರ್ 1 ರಿಂದ ಸಿಬ್ಬಂದಿಯ ವೇತನ ಕಡಿತ ಇಲ್ಲವೆಂದು ತಿಳಿಸಿದೆ.

ಸೆಪ್ಟೆಂಬರ್ 1 ರಿಂದ ವೇತನ ಕಡಿತ ಕ್ರಮ ಹಿಂಪಡೆಯಲಾಗುವುದು. ಸಿಬ್ಬಂದಿಯ ಲೇಓವರ್ ಭತ್ಯೆ ಮತ್ತು ಭೋಜನ ವ್ಯವಸ್ಥೆ ನೀತಿಗಳನ್ನು ಕೂಡ ಪರಾಮರ್ಶೆ ಮಾಡಲು ಏರ್ ಇಂಡಿಯಾ ನಿರ್ಧರಿಸಿದೆ. ಸಂಸ್ಥೆಯ ಸಿಬ್ಬಂದಿಗೆ ವೇತನ ಕಡಿತ ಹಿಂಪಡೆಯುತ್ತಿರುವ ಮಾಹಿತಿಯನ್ನು ಏರ್ ಇಂಡಿಯಾ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್ ತಿಳಿಸಿದ್ದಾರೆ.

ಸೆಪ್ಟೆಂಬರ್ 1 ರಿಂದ ಎಲ್ಲಾ ಸಿಬ್ಬಂದಿಗಳ ವೇತನ ಕಡಿತ ನಿಲ್ಲಲಿದೆ. ಜನವರಿಯಲ್ಲಿ ಟಾಟಾ ಗ್ರೂಪ್ ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟದಲ್ಲಿದ್ದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಖರೀದಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments