Wednesday, August 17, 2022
Google search engine
HomeUncategorizedಸೂಟ್ ​ಕೇಸ್ ​ನಲ್ಲಿ 18 ಚೇಳು ಕಂಡು ಗಾಬರಿ ಬಿದ್ದ ಮಹಿಳೆ

ಸೂಟ್ ​ಕೇಸ್ ​ನಲ್ಲಿ 18 ಚೇಳು ಕಂಡು ಗಾಬರಿ ಬಿದ್ದ ಮಹಿಳೆ

ಸೂಟ್ ​ಕೇಸ್ ​ನಲ್ಲಿ 18 ಚೇಳು ಕಂಡು ಗಾಬರಿ ಬಿದ್ದ ಮಹಿಳೆ

ವಿಹಾರ ಮುಗಿಸಿ ವಾಪಸಾದ ಮಹಿಳೆಯೊಬ್ಬರು ಸೂಟ್​ಕೇಸ್​ ತೆಗೆದಾಗ ಚೇಳುಗಳು ಕಂಡುಬಂದಿದ್ದು, ಆಕೆ ಗಾಬರಿ ಬಿದ್ದಿದ್ದಾರೆ.

ಆಸ್ಟ್ರಿಯಾ ನಾರ್ಟನ್​ಬಾಚ್​ನ ಮಹಿಳೆಯೊಬ್ಬರು ಕ್ರೊಯೇಷಿಯಾದಲ್ಲಿ ವಿಹಾರಕ್ಕೆ ತೆರಳಿದ್ದು, ವಿಹಾರ ಮುಗಿಸಿ ತಮ್ಮೂರಿಗೆ ವಾಪಸಾದ ನಂತರ ತಮ್ಮ ಸೂಟ್​ಕೇಸ್​ನಲ್ಲಿ 18 ಜೀವಂತ ಚೇಳುಗಳು ಸೇರಿಕೊಂಡಿದ್ದನ್ನು ನೋಡಿ ಆಘಾತ ಅನುಭವಿಸಿದರು.

ತಾಯಿ ಚೇಳು ಮತ್ತು ಮರಿ ಚೇಳು ಸೇರಿ ಇವು 18 ರ ಸಂಖ್ಯೆಯಲ್ಲಿದ್ದವು ಎಂದು ಗುರುತಿಸಿದ್ದು, ಆಕೆ ತಕ್ಷಣ ಪ್ರಾಣಿ ರಕ್ಷಣಾ ಸೇವೆಗೆ ಕರೆ ಮಾಡಿ ನೆರವು ಬಯಸಿದರು.

ತಾಯಿ ಚೇಳು ಮತ್ತು ಮರಿ ಚೇಳುಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಾಣಿ ರಕ್ಷಣಾ ಸೇವೆಯ ತಂಡವು, ಪ್ರಸ್ತುತ ಅವು ಲಿಂಜ್​ ಪ್ರಾಣಿಗಳ ಆಶ್ರಯದಲ್ಲಿವೆ ಎಂದು ಹೇಳಿದೆ. ಈಗ ಅವುಗಳನ್ನುಕ್ರೊಯೇಷಿಯಾಕ್ಕೆ ಹಿಂದಿರುಗಿಸಲು ಯೋಜಿಸಿದ್ದಾರೆ.

ಈ ಹಿಂದೆ ಜೂನ್​ 30 ರಂದು ಕ್ರೊಯೇಷಿಯಾದಲ್ಲಿ ತನ್ನ ರಜೆಯ ನಂತರ ಲಿಂಜ್​ನ ಮಹಿಳೆಯೊಬ್ಬರು ತಮ್ಮ ಅಪಾರ್ಟ್ಮೆಂಟ್​ನಲ್ಲಿ ಚೇಳನ್ನು ಗುರುತಿಸಿದ್ದರು. ಕುತೂಹಲಕಾರಿ ಎಂದರೆ ಆ ಮಹಿಳೆ ತನ್ನ ರಜೆಯಿಂದ ಹಿಂದಿರುಗಿದ ಮೂರು ವಾರಗಳ ನಂತರ ಗುರುತಿಸಿದ್ದರು.

https://www.facebook.com/Tierhilfegusental/posts/755016182586623

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments