Thursday, August 11, 2022
Google search engine
HomeUncategorizedಸುಲಭವಾಗಿ ಪಡೆಯಬಹುದು ಡ್ರೈವಿಂಗ್‌ ಲೈಸನ್ಸ್‌, ಇದಕ್ಕಾಗಿ ನಿಮ್ಮ ಬಳಿ ಇರಲಿ ಈ ಎಲ್ಲ ದಾಖಲೆ

ಸುಲಭವಾಗಿ ಪಡೆಯಬಹುದು ಡ್ರೈವಿಂಗ್‌ ಲೈಸನ್ಸ್‌, ಇದಕ್ಕಾಗಿ ನಿಮ್ಮ ಬಳಿ ಇರಲಿ ಈ ಎಲ್ಲ ದಾಖಲೆ

ಸುಲಭವಾಗಿ ಪಡೆಯಬಹುದು ಡ್ರೈವಿಂಗ್‌ ಲೈಸನ್ಸ್‌, ಇದಕ್ಕಾಗಿ ನಿಮ್ಮ ಬಳಿ ಇರಲಿ ಈ ಎಲ್ಲ ದಾಖಲೆ

ಡ್ರೈವಿಂಗ್‌ ಲೈಸನ್ಸ್‌ ಅತ್ಯಂತ ಅಗತ್ಯವಾದ ದಾಖಲೆಗಳಲ್ಲೊಂದು. ಡಿಎಲ್‌ ಇಲ್ಲದೇ ನೀವು ಯಾವುದೇ ಮೋಟಾರು ವಾಹನವನ್ನು ಚಲಾಯಿಸುವಂತಿಲ್ಲ. ಡಿಎಲ್‌ ಇಲ್ಲದೇ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಸಾವಿರಾರು ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

ಈವರೆಗೂ ನೀವೇನಾದ್ರೂ ಡ್ರೈವಿಂಗ್‌ ಲೈಸನ್ಸ್‌ ಪಡೆದುಕೊಳ್ಳದೇ ಇದ್ರೆ ಕೂಡಲೇ ಅದನ್ನು ಮಾಡಿಸಿಕೊಳ್ಳಿ. ಯಾಕಂದ್ರೆ ಚಾಲನಾ ಪರವಾನಿಗೆ ಪಡೆಯುವುದು ಈಗ ಬಹಳ ಸುಲಭ. ಡಿಎಲ್‌ ಪಡೆಯುವ ಪ್ರಕ್ರಿಯೆಯಲ್ಲಿ ಎರಡು ಭಾಗಗಳಿವೆ.

ಮೊದಲು ಲರ್ನಿಂಗ್‌ ಲೈಸನ್ಸ್‌ ನಿಮಗೆ ಸಿಗುತ್ತದೆ. ನಂತರ ಶಾಶ್ವತ ಚಾಲನಾ ಪರವಾನಗಿಯನ್ನು ನೀಡಲಾಗುತ್ತದೆ. ಡಿಎಲ್‌ಗೆ ನೀವು ಅರ್ಜಿ ಹಾಕುವುದು ಹೇಗೆ? ಅದಕ್ಕೆ ಯಾವೆಲ್ಲಾ ದಾಖಲೆಗಳು ಬೇಕು ಅನ್ನೋದನ್ನು ನೋಡೋಣ.

ಲರ್ನಿಂಗ್‌ ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಲು ನೀವು https://sarathi.parivahan.gov.in/ ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.

ಲರ್ನರ್ ಲೈಸನ್ಸ್‌ ವಿಭಾಗದಲ್ಲಿರುವ ಅಪ್ಲಿಕೇಶನ್ ಫಾರ್ ನ್ಯೂ ಲರ್ನರ್ಸ್ ಲೈಸೆನ್ಸ್ ಮೇಲೆ ಕ್ಲಿಕ್ ಮಾಡಿ.ಅಲ್ಲಿ ಲರ್ನಿಂಗ್‌ ಲೈಸನ್ಸ್‌ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಂತರ ಮುಂದೆ ಕ್ಲಿಕ್ ಮಾಡಿ.

ಅದಾದ ಬಳಿಕ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಪಾವತಿ ಮೋಡ್ ಅನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿಸಿ.

ಇದಾದ ಬಳಿಕ RTO ಭೇಟಿಗಾಗಿ ಸ್ಲಾಟ್ ಅನ್ನು ಆಯ್ಕೆ ಮಾಡಿಕೊಳ್ಳಿ. ಎಲ್ಲಾ ದಾಖಲೆಗಳ ಸಮೇತ ಆರ್‌ಟಿಓಗೆ ತೆರಳಬೇಕು.

ಇದಕ್ಕೆ ಬೇಕಾಗಿರುವ ದಾಖಲೆಗಳೆಂದರೆ ಲರ್ನಿಂಗ್‌ ಲೈಸನ್ಸ್‌ಗಾಗಿ ಅರ್ಜಿ ಭರ್ತಿ ಮಾಡಿದ ಝೆರಾಕ್ಸ್‌ ಪ್ರತಿ, ಪಾಸ್ಪೋರ್ಟ್ ಅಳತೆಯ ಫೋಟೋ, ಅಡ್ರೆಸ್‌ ಪ್ರೂಫ್‌. ವೋಟರ್‌ ಐಡಿ, PAN ಕಾರ್ಡ್ ಅಥವಾ ಪಾಸ್‌ಪೋರ್ಟ್ ಇರಬೇಕು.  ಇವೆಲ್ಲವನ್ನು ಸಲ್ಲಿಸಿದರೆ ಲರ್ನಿಂಗ್‌ ಲೈಸನ್ಸ್‌ ದೊರೆಯುತ್ತದೆ.

ನಂತರ ನೀವು ಶಾಶ್ವತ ಡ್ರೈವಿಂಗ್ ಲೈಸೆನ್ಸ್ ಕೂಡ ಪಡೆಯಬೇಕು. ಇದಕ್ಕಾಗಿ ಪ್ರತ್ಯೇಕ ಶುಲ್ಕ ಪಾವತಿಸಿ ಅಂತಿಮ ಪರೀಕ್ಷೆಯನ್ನು ಆರ್ಟಿಓದಲ್ಲಿ ನೀಡಬೇಕಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments