Wednesday, August 17, 2022
Google search engine
HomeUncategorizedಸುರಿಯುವ ಮಳೆಯಲ್ಲೂ ರೈನ್ ಕೋಟ್ ಇಲ್ಲದೆ ಕಾದು ನಿಂತ ಸ್ವಿಗ್ಗಿ ಡೆಲಿವರಿ ಬಾಯ್…! ವಿಡಿಯೋ ನೋಡಿ...

ಸುರಿಯುವ ಮಳೆಯಲ್ಲೂ ರೈನ್ ಕೋಟ್ ಇಲ್ಲದೆ ಕಾದು ನಿಂತ ಸ್ವಿಗ್ಗಿ ಡೆಲಿವರಿ ಬಾಯ್…! ವಿಡಿಯೋ ನೋಡಿ ಮಮ್ಮುಲು ಮರುಗಿದ ಜನ

ಸುರಿಯುವ ಮಳೆಯಲ್ಲೂ ರೈನ್ ಕೋಟ್ ಇಲ್ಲದೆ ಕಾದು ನಿಂತ ಸ್ವಿಗ್ಗಿ ಡೆಲಿವರಿ ಬಾಯ್…! ವಿಡಿಯೋ ನೋಡಿ ಮಮ್ಮುಲು ಮರುಗಿದ ಜನ

ಜೀವನವೆಂಬುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಯುತ್ತಿದ್ದರೆ ಬಹುತೇಕರು ಕಡು ಕಷ್ಟದಲ್ಲೂ ಜೀವನದ ಬಂಡಿ ಎಳೆಯುತ್ತಿರುತ್ತಾರೆ. ಇಂಥವರ ಪೈಕಿ ಫುಡ್ ಡೆಲಿವರಿ ಬಾಯ್ ಗಳ ಕಥೆಯೂ ಒಂದು.

ಮನೆಯಲ್ಲಿ ಕುಳಿತು ಫುಡ್ ಆರ್ಡರ್ ಮಾಡಿದ ವೇಳೆ ಸುಡುವ ಬಿಸಿಲಿರಲಿ, ಸುರಿಯುವ ಮಳೆ ಅಥವಾ ಮೈ ನಡುಗಿಸುವ ಚಳಿ ಇರಲಿ ಡೆಲಿವರಿ ಬಾಯ್ ಗಳು ಅವುಗಳನ್ನು ನಿಗದಿತ ಸಮಯಕ್ಕೆ ತಲುಪಿಸುತ್ತಾರೆ. ಇಂತಹ ಫುಡ್ ಡೆಲಿವರಿ ಬಾಯ್ ಒಬ್ಬರ ಹೃದಯಸ್ಪರ್ಶಿ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಟ್ರಾಫಿಕ್ ಸಿಗ್ನಲ್ ಒಂದರ ಬಳಿ ಸೆರೆ ಹಿಡಿಯಲಾಗಿದ್ದು, ಸುರಿಯುತ್ತಿರುವ ಮಳೆ ನಡುವೆ ಸ್ವಿಗ್ಗಿ ಡೆಲಿವರಿ ಬಾಯ್ ರೈನ್ ಕೋಟ್ ಇಲ್ಲದಿದ್ದರೂ ಸಹ ಕಾದು ನಿಂತಿರುತ್ತಾನೆ. ಆತ ಸಂಪೂರ್ಣವಾಗಿ ತೊಯ್ದು ಹೋಗಿದ್ದರೂ ಅದನ್ನು ಲೆಕ್ಕಿಸದೆ ಆರ್ಡರ್ ಮಾಡಿದವರ ಫುಡ್ ಸಕಾಲಕ್ಕೆ ತಲುಪಿಸುವ ಚಿಂತೆಯಲ್ಲಿರುವಂತೆ ಕಾಣುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ಮಮ್ಮಲು ಮರುಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments