Monday, December 5, 2022
Google search engine
HomeUncategorizedಸುಖಕರ ನಿದ್ರೆಗೆ ಇಲ್ಲಿದೆ ಪಂಚ ʼಸೂತ್ರʼ

ಸುಖಕರ ನಿದ್ರೆಗೆ ಇಲ್ಲಿದೆ ಪಂಚ ʼಸೂತ್ರʼ

ಸುಖಕರ ನಿದ್ರೆಗೆ ಇಲ್ಲಿದೆ ಪಂಚ ʼಸೂತ್ರʼ

ಅನೇಕರಿಗೆ ನಿದ್ದೆ ಒಂದು ವರ. ಇನ್ನೂ ಕೆಲವರಿಗೆ ನಿದ್ದೆ ಒಂದು ಶಾಪ. ಆದರೆ ಬಹಳಷ್ಟು ಮಂದಿಗೆ ನಿದ್ದೆ ಮಾಡೋ ಟೈಮಲ್ಲೂ ನಿದ್ದೆನೇ ಬರಲ್ಲ. ಹಾಗೆ ನಿದ್ದೆ ಬಾರದೇ ಒದ್ದಾಡೋರಿಗಾಗಿ ಇಲ್ಲಿದೆ 5 ಪರಿಣಾಮಕಾರಿ ಟಿಪ್ಸ್.

ಎಚ್ಚವಾಗಿರಲು ಯತ್ನಿಸಿ : ಹೌದು ಇದು ರಿವರ್ಸ್ ಸೈಕಾಲಜಿ. ಎಚ್ಚರವಾಗಿರಬೇಕು ಎಂದು ನಿಮ್ಮ ಮೆದುಳಿಗೆ ಒತ್ತಡ ಹಾಕಿದಾಗ ನಿದ್ದೆ ಬರುವ ಸಾಧ್ಯತೆ ಹೆಚ್ಚು.

ಪಾದಗಳನ್ನು ಬೆಚ್ಚಗಿಡಿ : ಸಾಕ್ಸ್ ಅಥವಾ ಹೊದಿಕೆಯಿಂದ ನಿಮ್ಮ ಪಾದವನ್ನು ಆದಷ್ಟು ಬೆಚ್ಚಗಾಗಿಸಿ ನಿದ್ದೆ ಮಾಡಲು ಯತ್ನಿಸಿ.

4-7-8 ಪ್ರಯತ್ನಿಸಿ : ಮಲಗುವ ಮುನ್ನ 4 ಸೆಕೆಂಡುಗಳ ಕಾಲ ಮೂಗಿನ ಮೂಲಕ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ, 7 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಿ ಹಾಗೂ 8 ಸೆಕೆಂಡುಗಳನ್ನು ಎಣಿಸುತ್ತ ಬಾಯಿಯ ಮೂಲಕ ಉಸಿರನ್ನು ಬಿಡಿ. ಹೀಗೆಯೇ ನಾಲ್ಕಾರು ಬಾರಿ ಮಾಡಿ.

ಮಸಾಲೆ ಹಾಲು ಕುಡಿಯಿರಿ : ರಾತ್ರಿ ಊಟವಾಗಿ 3 ತಾಸುಗಳ ನಂತರ ಮಸಾಲೆ ಹಾಲು ಅಥವಾ ಬೆಚ್ಚಗಿನ ಹಾಲು ಕುಡಿಯಿರಿ.

ಬಬ್ಬಲ್ಸ್ ಊದಿ : ಗುಳ್ಳೆಗಳನ್ನು ಊದುವಾಗ ನೀವು ದೀರ್ಘವಾದ ಶ್ವಾಸೋಚ್ವಾಸ ಮಾಡಬೇಕಾಗುತ್ತದೆ. ಬಾಲ್ಯವನ್ನು ನೆನಪಿಸುವ ಈ ಕ್ರಿಯೆ ನಿಮಗೆ ಖುಷಿ ನೀಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments