Wednesday, August 10, 2022
Google search engine
HomeUncategorizedಸಿದ್ಧರಾಮಯ್ಯ ಅಮೃತ ಮಹೋತ್ಸವ ಯಶಸ್ಸಿನ ಬಗ್ಗೆ ಅಚ್ಚರಿ ವಿಷಯ ತಿಳಿಸಿದ ಸತೀಶ್ ಜಾರಕಿಹೊಳಿ: ಬಿಜೆಪಿ ಶಾಸಕರಿಂದಲೂ...

ಸಿದ್ಧರಾಮಯ್ಯ ಅಮೃತ ಮಹೋತ್ಸವ ಯಶಸ್ಸಿನ ಬಗ್ಗೆ ಅಚ್ಚರಿ ವಿಷಯ ತಿಳಿಸಿದ ಸತೀಶ್ ಜಾರಕಿಹೊಳಿ: ಬಿಜೆಪಿ ಶಾಸಕರಿಂದಲೂ ವಾಹನ ವ್ಯವಸ್ಥೆ, ದೀಪಾವಳಿ ಆಫರ್ ರೀತಿ ಪಕ್ಷಕ್ಕೆ ಶಕ್ತಿ

ಸಿದ್ಧರಾಮಯ್ಯ ಅಮೃತ ಮಹೋತ್ಸವ ಯಶಸ್ಸಿನ ಬಗ್ಗೆ ಅಚ್ಚರಿ ವಿಷಯ ತಿಳಿಸಿದ ಸತೀಶ್ ಜಾರಕಿಹೊಳಿ: ಬಿಜೆಪಿ ಶಾಸಕರಿಂದಲೂ ವಾಹನ ವ್ಯವಸ್ಥೆ, ದೀಪಾವಳಿ ಆಫರ್ ರೀತಿ ಪಕ್ಷಕ್ಕೆ ಶಕ್ತಿ

ಬೆಳಗಾವಿ: ಸಿದ್ದರಾಮಯ್ಯ ಅಮೃತ ಮಹೋತ್ಸವ ಯಶಸ್ವಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ದೀಪಾವಳಿ ಆಫರ್ ರೀತಿ ಪಕ್ಷಕ್ಕೆ ಒಂದು ಹೊಸ ಶಕ್ತಿ ಕೊಟ್ಟಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ತಬ್ಬಿಕೊಳ್ಳುವಂತೆ ಡಿ.ಕೆ. ಶಿವಕುಮಾರ್ ಗೆ ಸೂಚಿಸಿರುವುದರಲ್ಲಿ ತಪ್ಪೇನಿಲ್ಲ. ಡಿ.ಕೆ. ಶಿವಕುಮಾರ್ ಮರೆತಿರಬಹುದು, ರಾಹುಲ್ ಗಾಂಧಿ ಹಾಗೇ ಸೂಚಿಸಿದರಲ್ಲಿ ತಪ್ಪೇನಿಲ್ಲ. ಮನಸಾರೆ ತಬ್ಬಿಕೊಂಡೇ ಸಿದ್ದರಾಮಯ್ಯ -ಡಿಕೆಶಿ ಕೈಜೋಡಿಸಿದ್ದಾರೆ ಎಂದರು.

ಪಕ್ಷ ಸಂಘಟನೆ, ಚುನಾವಣೆಯ ಬಗ್ಗೆ ರಾಹುಲ್ ಗಾಂಧಿ ಅವರೊಂದಿಗೆ ಜೊತೆ ಚರ್ಚೆ ನಡೆಸಿದ್ದೇವೆ. ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬಂದವರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು. ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು ಕೂಡ ವಾಹನಗಳ ವ್ಯವಸ್ಥೆ ಮಾಡಿದ್ದರು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments