Thursday, August 11, 2022
Google search engine
HomeUncategorizedಸಿದ್ದು ಅಭಿಮಾನಿಗಳಲ್ಲಿ ಮನೆ ಮಾಡಿದ ಸಂಭ್ರಮ; ‘ಸಿದ್ದರಾಮೋತ್ಸವ’ ಕ್ಕೆ ಹರಿದು ಬಂದ ಜನಸಾಗರ

ಸಿದ್ದು ಅಭಿಮಾನಿಗಳಲ್ಲಿ ಮನೆ ಮಾಡಿದ ಸಂಭ್ರಮ; ‘ಸಿದ್ದರಾಮೋತ್ಸವ’ ಕ್ಕೆ ಹರಿದು ಬಂದ ಜನಸಾಗರ

ಸಿದ್ದು ಅಭಿಮಾನಿಗಳಲ್ಲಿ ಮನೆ ಮಾಡಿದ ಸಂಭ್ರಮ; ‘ಸಿದ್ದರಾಮೋತ್ಸವ’ ಕ್ಕೆ ಹರಿದು ಬಂದ ಜನಸಾಗರ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ದೇವನಗರಿ ದಾವಣಗೆರೆಯಲ್ಲಿ ಅದ್ದೂರಿ ಹುಟ್ಟುಹಬ್ಬ ಆಯೋಜಿಸಲಾಗಿದ್ದು, ಇದಕ್ಕೆ ಜನಸಾಗರವೇ ಹರಿದು ಬಂದಿದೆ.

ಸಾವಿರಾರು ವಾಹನಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ದಾವಣಗೆರೆಗೆ ಬಂದಿದ್ದು, ಹೀಗಾಗಿ ಬೆಣ್ಣೆ ನಗರಿಯಲ್ಲಿ ಎಲ್ಲಿ ನೋಡಿದರೂ ಜನರೇ ಕಂಡು ಬರುತ್ತಿದ್ದಾರೆ.

ಅದರಲ್ಲೂ ಕಾರ್ಯಕ್ರಮ ನಡೆಯಲಿರುವ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಸಿದ್ದರಾಮಯ್ಯನವರ ಫೋಟೋಗಳನ್ನು ಹಿಡಿದುಕೊಂಡ ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದಾರೆ.

ಕೆಲವರು ಕರಿ ಕಂಬಳಿ ಹೊದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷ ಆಕರ್ಷಣೆಗೆ ಕಾರಣರಾಗಿದ್ದಾರೆ. 8000 ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಇಂದು ಮುಂಜಾನೆಯಿಂದಲೇ ಆಗಮಿಸಿರುವವರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

150 ಕೌಂಟರ್ ಗಳಲ್ಲಿ ಬಿಸಿಬೇಳೆ ಬಾತ್ ಬಡಿಸಲಾಗಿದ್ದು, ಮಧ್ಯಾಹ್ನದ ಊಟಕ್ಕೂ ಭೋಜನ ಸಿದ್ಧಪಡಿಸಲಾಗಿದೆ. ಮೈದಾನದ ಸುತ್ತಲೂ ಎಲ್ಲಿ ನೋಡಿದರೂ ಸಿದ್ದರಾಮಯ್ಯನವರ ಪರ ಘೋಷಣೆಗಳು ಕೇಳಿ ಬರುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments