Tuesday, September 27, 2022
Google search engine
HomeUncategorizedಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಹಳೆ ಕಾರ್ ಮಾರಾಟಕ್ಕೆ ಹೊಸ ನಿಯಮ

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಹಳೆ ಕಾರ್ ಮಾರಾಟಕ್ಕೆ ಹೊಸ ನಿಯಮ

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಹಳೆ ಕಾರ್ ಮಾರಾಟಕ್ಕೆ ಹೊಸ ನಿಯಮ

ನವದೆಹಲಿ: ಹಳೆ ಕಾರ್ ಗಳ ಮಾರಾಟಕ್ಕೆ ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಡಿಸೆಲ್ಲರ್ ಗಳ ನೋಂದಣಿ ಕಡ್ಡಾಯವಾಗಿದ್ದು, ಮಧ್ಯವರ್ತಿಗಳು ಲೈಸೆನ್ಸ್ ಪಡೆದುಕೊಳ್ಳಬೇಕಿದೆ. ಈ ಮೂಲಕ ಗ್ರಾಹಕರ ರಕ್ಷಿಸುವ ಮತ್ತು ವಾಹನಗಳ ಮರು ಮಾರಾಟ ನಿಯಂತ್ರಿಸಲು ಸರ್ಕಾರ ಹೊಸ ನಿಯಮ ಜಾರಿಗೆ ಸರ್ಕಾರ ನಿರ್ಧರಿಸಿದೆ.

ಮಧ್ಯವರ್ತಿಗಳು ವಾಹನಗಳ ಮರು ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ತಾವು ವ್ಯವಹಾರ ನಡೆಸುವ ಸಂಸ್ಥೆಯ ಹೆಸರನ್ನು ಸಾರಿಗೆ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಧ್ಯವರ್ತಿಗಳು ರಾಜ್ಯ ಸಾರಿಗೆ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ನಂತರ ಮರು ಮಾರಾಟಗಾರರಿಗೆ ಲೈಸೆನ್ಸ್ ನೀಡಲಾಗುವುದು.

ರೀಸೆಲ್ಲರ್ ಡೀಲರ್ ಶಿಪ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಲೈಸೆನ್ಸ್ ರದ್ದುಗೊಳಿಸಿ ದಂಡ ವಿಧಿಸಲಾಗುವುದು. ವಾಹನ ಮಾರಾಟಕ್ಕೆ ನೋಂದಾಯಿಸಿದ ನಂತರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಡೀಲರ್ ಮಾತ್ರ ಜವಾಬ್ದಾರಿಯಾಗಿರುತ್ತಾರೆ. ಬಳಸಿದ ವಾಹನಗಳ ಖರೀದಿದಾರರು ಮತ್ತು ಮಾರಾಟಗಾರರ ರಕ್ಷಣೆಯ ಉದ್ದೇಶ ಹಾಗೂ ಪಾರದರ್ಶಕತೆ ಕಾಪಾಡುವ ಹಿನ್ನೆಲೆಯಲ್ಲಿ ಹೊಸ ಮಾರ್ಗ ಸೂಚಿ ಜಾರಿಗೆ ತರಲಾಗುತ್ತದೆ.

ಹಳೆ ಕಾರು ಖರೀದಿಸಿದ ಮಾಲೀಕರು ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ವಾಹನಗಳ ಹಿಂದಿನ ಮಾಲೀಕನಿಗೆ ದಂಡ ನೀಡುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments