Sunday, September 25, 2022
Google search engine
HomeUncategorizedಸಾಫ್ಟ್‌ವೇರ್​ ಇಂಜಿನಿಯರಾ ? ಹಾಗಾದ್ರೆ ಕರೆ ಮಾಡಬೇಡಿ; ಮ್ಯಾಟ್ರಿಮೋನಿ​ ಜಾಹೀರಾತಲ್ಲಿ ಅಚ್ಚರಿ ಸಂದೇಶ

ಸಾಫ್ಟ್‌ವೇರ್​ ಇಂಜಿನಿಯರಾ ? ಹಾಗಾದ್ರೆ ಕರೆ ಮಾಡಬೇಡಿ; ಮ್ಯಾಟ್ರಿಮೋನಿ​ ಜಾಹೀರಾತಲ್ಲಿ ಅಚ್ಚರಿ ಸಂದೇಶ

ಸಾಫ್ಟ್‌ವೇರ್​ ಇಂಜಿನಿಯರಾ ? ಹಾಗಾದ್ರೆ ಕರೆ ಮಾಡಬೇಡಿ; ಮ್ಯಾಟ್ರಿಮೋನಿ​ ಜಾಹೀರಾತಲ್ಲಿ ಅಚ್ಚರಿ ಸಂದೇಶ

ಈ ಕಾಲಘಟ್ಟದಲ್ಲಿ ಸಾಫ್ಟ್‌ವೇರ್​ ಇಂಜಿನಿಯರ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ವೈವಾಹಿಕ ಸಂಬಂಧ ಏರ್ಪಡುವ ಸಂದರ್ಭದಲ್ಲಂತೂ ಸಾಫ್ಟ್‌ವೇರ್​ ಇಂಜಿನಿಯರ್​ಗೆ ಮಣೆ ಹಾಕುವುದು ಸಾಮಾನ್ಯ. ಆದರೆ ಅಚ್ಚರಿ ಎಂಬಂತೆ ಇಲ್ಲೊಂದು ವೈವಾಹಿಕ ಜಾಹಿರಾತಲ್ಲಿ ಸಾಫ್ಟ್‌ವೇರ್ ಇಂಜಿನಿಯರ್​ಗೆ ದೂರ ಇಟ್ಟಿರುವುದು ಕಾಣಿಸಿದೆ.

ಪತ್ರಿಕೆಯ ಜಾಹೀರಾತು ವಾಸ್ತವವಾಗಿ “ಸಾಫ್ಟ್​ವೇರ್​ ಇಂಜಿನಿಯರ್​” ಅಲ್ಲದ ವರನನ್ನು ಹುಡುಕುವಂತಿದೆ. ಈ ಪೋಸ್ಟ್ ​ಅನ್ನು ಉದ್ಯಮಿ ಸಮೀರ್​ ಅರೋರಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅದು ಪತ್ರಿಕೆಯೊಂದರಲ್ಲಿನ ವೈವಾಹಿಕ ಜಾಹೀರಾತನ್ನು ಒಳಗೊಂಡಿತ್ತು.

24 ವರ್ಷದ, ವ್ಯವಹಾರದ ಹಿನ್ನೆಲೆಯ ಶ್ರೀಮಂತ ಕುಟುಂಬದ ವಧುವಿಗೆ ವರನನ್ನು ಹುಡುಕುವ ಪ್ರಸ್ತಾಪ ಅದರಲ್ಲಿದ್ದು, ಅದೇ ಜಾತಿಯ ಐಎಎಸ್​/ಐಪಿಎಸ್​ ಅಥವಾ ವೈದ್ಯ (ಪಿಜಿ) ಅಥವಾ ಕೈಗಾರಿಕೋದ್ಯಮಿ/ಉದ್ಯಮಿ ಆಗಿರುವ ವರನನ್ನು ಬಯಸಿತ್ತು.

“ಸಾಫ್ಟ್​ವೇರ್​ ಎಂಜಿನಿಯರ್​ಗಳು ದಯಮಾಡಿ ಕರೆ ಮಾಡಬೇಡಿ” ಎಂದು ಜಾಹೀರಾತು ಕೊನೆಯಲ್ಲಿ ಉಲ್ಲೇಖಿಸಲಾಗಿದೆ. ಜಾಹೀರಾತನ್ನು ಹಂಚಿಕೊಳ್ಳುವಾಗ ಸಮೀರ್​ ಅರೋರಾ “ಐಟಿಯ ಭವಿಷ್ಯವು ಅಷ್ಟು ಉತ್ತಮವಾಗಿಲ್ಲ” ಎಂದು ಕೆಣಕಿ ಬರೆದ್ದಾರೆ.

ಈ ಪೋಸ್ಟ್​ ನಿಸ್ಸಂಶಯವಾಗಿ ನೆಟ್ಟಿಗರ ಗಮನವನ್ನು ಸೆಳೆಯಿತಲ್ಲದೇ, ಕಾಮೆಂಟ್ ​ಮಾಡಲು ಪ್ರಚೋದಿಸಿದೆ. “ಜಾಹೀರಾತನ್ನು ನೋಡುವಾಗ, ಇಡೀ ದೇಶದ ಭವಿಷ್ಯವು ಅಷ್ಟು ಉತ್ತಮವಾಗಿಲ್ಲ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, “ಐಟಿ ಇಲ್ಲದೆ ಭವಿಷ್ಯವು ಉತ್ತಮವಾಗಿರಲು ಸಾಧ್ಯವಿಲ್ಲ” ಎಂದು ಕಾಮೆಂಟ್​ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments