Tuesday, December 6, 2022
Google search engine
HomeUncategorizedಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ ಜೀವಿಗಳನ್ನು ಕಂಡುಹಿಡಿದಿದೆ.

ಮೀನು ಜೀವಶಾಸ್ತ್ರಜ್ಞ ಯಿ-ಕೈ ಟೀ ಅವರು ತಮ್ಮ ತನಿಖೆಯ ಸಮಯದಲ್ಲಿ ಹಾರುವ ಮೀನನ್ನು ಕಂಡುಹಿಡಿದಿದ್ದು ಇವುಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ, ಮೀನುಗಳು ತಮ್ಮ ರೆಕ್ಕೆಯಂತಹ ರೆಕ್ಕೆಗಳೊಂದಿಗೆ ಹಾರುತ್ತಿರುವುದನ್ನು ಕಾಣಬಹುದು. ಈ ಹಾರುವ ಜೀವಿಗಳನ್ನು ನೋಡುವುದೇ ತುಂಬಾ ಅದ್ಭುತ ಎಂದು ಅವರು ಬರೆದುಕೊಂಡಿದ್ದಾರೆ.

“ದಿನವಿಡೀ ಹಾರುವ ಮೀನುಗಳ ಫೋಟೋ ತೆಗೆಯುತ್ತಿದ್ದೇನೆ. ನಾವು ಈಗ 6 ಜಾತಿಗಳ ಹಾರುವ ಮೀನನ್ನು ನೋಡಿದ್ದೇವೆ. ಆದರೆ ಈಗ ಸಿಕ್ಕಿರುವ ಹಾರುವ ಮೀನು ಅವುಗಳಿಗಿಂತಲೂ ಭಿನ್ನವಾಗಿದ್ದು, ಹಲವು ಸ್ವಾರಸ್ಯಕರ ಸಂಗತಿಗಳನ್ನು ಹೊಂದಿವೆ“ ಎಂದು ಅವರು ಬರೆದಿದ್ದಾರೆ.

ಮೀನುಗಳಿಗೆ ರೆಕ್ಕೆಗಳಿರುತ್ತವೆ ನಿಜ. ಆದರೆ ಈ ಸಿಕ್ಕಿರುವ ಮೀನಿನ ರೆಕ್ಕೆಗಳ ಮೂಲಕ ಅವು ಹಾರಾಟ ಮಾಡುತ್ತವೆ. ಮಾತ್ರವಲ್ಲದೇ ಅವು ಈ ರೆಕ್ಕೆಗಳನ್ನು ಕೋಲಿನಂತೆ ಬಳಸಿ ನಿಲ್ಲುತ್ತವೆ ಎಂಬ ಕುತೂಹಲದ ಮಾಹಿತಿಯನ್ನೂ ಅವರು ಶೇರ್​ ಮಾಡಿಕೊಂಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments