ಸಖತ್ ಕ್ಯೂಟ್ ಆಗಿದೆ ಪಾಸ್ ಪೋರ್ಟ್ ಫೋಟೋಗೆ ಪೋಸ್ ನೀಡಿದ ಪುಟ್ಟ ಬಾಲಕನ ಈ ವಿಡಿಯೋ

ಹೌದು, ಪುಟ್ಟ ಬಾಲಕನೊಬ್ಬ ತನ್ನ ಪಾಸ್ಪೋರ್ಟ್ ಫೋಟೋ ಕ್ಲಿಕ್ಕಿಸಿಕೊಳ್ಳುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಚಿಕ್ಕ ವಿಡಿಯೋದಲ್ಲಿ, ಬಾಲಕನೊಬ್ಬ ತನ್ನ ಪಾಸ್ಪೋರ್ಟ್ ಛಾಯಾಚಿತ್ರಕ್ಕಾಗಿ ಫೋಸ್ ನೀಡುತ್ತಿರುವುದನ್ನು ನೋಡಬಹುದು.
ಫೋಟೋ ಕ್ಲಿಕ್ಕಿಸುತ್ತಿದ್ದ ಛಾಯಾಗ್ರಾಹಕನಿಗೆ ಆ ಚಿತ್ರ ಎಷ್ಟು ಇಷ್ಟವಾಯಿತು ಅಂದರೆ, ಮುದ್ದಾಗಿ ಕಾಣುತ್ತಿದ್ದೀಯಾ. ಆದರೆ ನಿನ್ನ ಹಲ್ಲುಗಳನ್ನು ಮಾತ್ರ ತೋರಿಸಬೇಡ ಎಂದು ಕೇಳಿಕೊಂಡಿದ್ದಾನೆ.
ಆನ್ಲೈನ್ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 18.1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.