Thursday, August 11, 2022
Google search engine
HomeUncategorizedಸಕ್ಕರೆ ಕಾಯಿಲೆಗೆ ರಾಮಬಾಣ ಸಬ್ಬಸಿಗೆ ಸೊಪ್ಪು

ಸಕ್ಕರೆ ಕಾಯಿಲೆಗೆ ರಾಮಬಾಣ ಸಬ್ಬಸಿಗೆ ಸೊಪ್ಪು

ಸಕ್ಕರೆ ಕಾಯಿಲೆಗೆ ರಾಮಬಾಣ ಸಬ್ಬಸಿಗೆ ಸೊಪ್ಪು

ಸಕ್ಕರೆ ಕಾಯಿಲೆ ಇರುವವರು ದಿನನಿತ್ಯದ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹ ಹೊಂದಿರುವ ವ್ಯಕ್ತಿಯಲ್ಲಿ ದೇಹದ ಕಿಣ್ವಗಳು ಇನ್ಸುಲಿನ್ ಅನ್ನು ಸರಿಯಾಗಿ ಸ್ರವಿಸಲು ಸಾಧ್ಯವಾಗುವುದಿಲ್ಲ. ಇನ್ಸುಲಿನ್ ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ, ಇದರ ಸಹಾಯದಿಂದ ನಮ್ಮ ಜೀವಕೋಶಗಳು ರಕ್ತದ ಮೂಲಕ ಸಕ್ಕರೆಯನ್ನು ಪಡೆಯುತ್ತವೆ, ಅದು ನಮಗೆ ಶಕ್ತಿಯನ್ನು ನೀಡುತ್ತದೆ.

ಮಧುಮೇಹ ಸಮಸ್ಯೆ ಇದ್ದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುವುದು ಬಹಳ ಮುಖ್ಯ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವನೆ ಮಾಡಬೇಕು. ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಬ್ಬಸಿಗೆ ಸೊಪ್ಪನ್ನು ಬಳಸಿ. ನಿಯಮಿತವಾಗಿ ಇವುಗಳನ್ನು ಬಳಸಿದ್ರೆ ಕೆಲವೇ ದಿನಗಳಲ್ಲಿ ಪರಿಣಾಮ ಗೋಚರಿಸುತ್ತದೆ.

ಇದು ಮಧುಮೇಹ ರೋಗಿಗಳಿಗೆ ಯಾವುದೇ ಸೂಪರ್‌ಫುಡ್ ಅಥವಾ ಔಷಧಿಗಿಂತ ಕಡಿಮೆಯಿಲ್ಲ. ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಸಬ್ಬಸಿಗೆ ಎಲೆಗಳು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸಬ್ಬಸಿಗೆ ಸೊಪ್ಪು ನಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಅಂದರೆ ಫ್ಲಕ್ಸ್ ಅನ್ನು ನಿಯಂತ್ರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಂಟ್ರೋಲ್‌ ಮಾಡುತ್ತದೆ. ಸಬ್ಬಸಿಗೆ ಸೊಪ್ಪು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಕರೋನಾದಂತಹ ಸೋಂಕಿನ ಸಮಯದಲ್ಲಿ ಇದನ್ನು ಸೇವಿಸುವುದು ಸೂಕ್ತ.

ಸಬ್ಬಸಿಗೆ ಸೊಪ್ಪನ್ನು ಬಳಸುವುದು ಹೇಗೆ?

ಸಬ್ಬಸಿಗೆ ಸೊಪ್ಪನ್ನು ಅನೇಕ ಬಗೆಯಲ್ಲಿ ಬಳಕೆ ಮಾಡಬಹುದು. ಇದರ ರುಚಿಯನ್ನು ಹೆಚ್ಚಿಸಲು ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ಜೀರಿಗೆ ಮತ್ತು ಸಾಸಿವೆಗಳನ್ನು ಸಹ ಬಳಸಲಾಗುತ್ತದೆ. ಸಬ್ಬಸಿಗೆ ಸೊಪ್ಪನ್ನು ಸೇವಿಸುವ ಆರೋಗ್ಯಕರ ವಿಧಾನವೆಂದರೆ ಅದರ ರಸವನ್ನು ತೆಗೆದು ಕುಡಿಯುವುದು. ಮೊದಲು ಸಬ್ಬಸಿಗೆ ಸೊಪ್ಪನ್ನು ಮಿಕ್ಸರ್‌ ಗ್ರೈಂಡರ್‌ನಲ್ಲಿ ರುಬ್ಬಿ ರಸ ತೆಗೆದುಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ನಿಂಬೆರಸ ಮತ್ತು ಬ್ಲಾಕ್‌ ಸಾಲ್ಟ್‌ ಸೇರಿಸಿ ಕುಡಿಯಿರಿ. ಸಬ್ಬಸಿಗೆ ಸೊಪ್ಪಿನ ರೊಟ್ಟಿ ಅಥವಾ ಪರೋಟ ಕೂಡ ಮಾಡಿ ಸೇವನೆ ಮಾಡಬಹುದು. ಇದಲ್ಲದೇ ಸಲಾಡ್, ಸೂಪ್ ಅಥವಾ ಉಪ್ಪಿನಕಾಯಿ ತಯಾರಿಸಿ ಸೇವಿಸಬಹುದು. ಮಧುಮೇಹ ರೋಗಿಗಳು ಸಬ್ಬಸಿಗೆ ಸೊಪ್ಪಿನ ಖಾದ್ಯ ತಯಾರಿಸುವಾಗ ಜಾಸ್ತಿ ಎಣ್ಣೆ ಬಳಸಬಾರದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments