Wednesday, August 17, 2022
Google search engine
HomeUncategorized‘ಶೇರಾ ದೇ ಪುತ್ತರ್​ ಶೇರ್​’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರು ಸಿಂದ ಎದ್ದೇಳುತ್ತಿದ್ದಂತೆಯೇ ಪರಾರಿ…! ವಿಡಿಯೋ ವೈರಲ್

‘ಶೇರಾ ದೇ ಪುತ್ತರ್​ ಶೇರ್​’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರು ಸಿಂದ ಎದ್ದೇಳುತ್ತಿದ್ದಂತೆಯೇ ಪರಾರಿ…! ವಿಡಿಯೋ ವೈರಲ್

‘ಶೇರಾ ದೇ ಪುತ್ತರ್​ ಶೇರ್​’ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರು ಸಿಂದ ಎದ್ದೇಳುತ್ತಿದ್ದಂತೆಯೇ ಪರಾರಿ…! ವಿಡಿಯೋ ವೈರಲ್

ಸರಪಳಿಯಲ್ಲಿ ಬಂಧಿಯಾದ ಸಿಂಹದ ಮುಂದೆ ಗುಂಪೊಂದು ಹರಟೆ ಕೊಚ್ಚುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಸಿಂಹದ ಮುಂದೆ ಫೋಟೋ ಕ್ಲಿಕ್ಕಿಸಲು ಸುತ್ತಲೂ ಒಟ್ಟುಗೂಡಿದ ಗುಂಪಿನ ವಿಡಿಯೊ ತೆಗೆಯಲಾಗಿದ್ದು, ಆ ಫೋಟೋ ವಿಶೇಷ ಸೆಷನ್​ ಈಗ ವೈರಲ್​ ಆಗಿದೆ.

ವಿಡಿಯೋ ಕ್ಲಿಪ್​ನ ಅಂತ್ಯದಲ್ಲಿ, ಸಿಂಹವು ತನ್ನ ಸ್ಥಾನದಿಂದ ಮೇಲಕ್ಕೆ ಎದ್ದೇಳುತ್ತಿದ್ದಂತೆ ಎದುರಿಗಿದ್ದವರು ಓಟ ಕೀಳುವುದನ್ನು ಕಾಣಬಹುದು.

ಒಬ್ಬ ವ್ಯಕ್ತಿ ಚಿತ್ರೀಕರಿಸಲು ಪ್ರಾರಂಭಿಸಿದಾಗ “ಶೇರಾ​ ದಿ ಪುತ್ತರ್​ ಶೇರ್​ (ಸಿಂಹದ ಮರಿ ಯಾವಾಗಲೂ ಸಿಂಹ)” ಎಂದು ಜೋರಾಗಿ ಕೂಗುತ್ತಾನೆ. ಮುಂದಿನ ಸೆಕೆಂಡಿನಲ್ಲಿಯೇ, ಶಾಂತವಾಗಿ ಕುಳಿತಿದ್ದ ನಾಲ್ಕು ಕಾಲಿನ ಸಿಂಹ ಇದ್ದಕ್ಕಿದ್ದಂತೆ ದೊಡ್ಡ ಶಬ್ದದಿಂದ ಕೆರಳುತ್ತದೆ. ಈ ವೇಳೆ ಸಿಂಹವನ್ನು ನಿಯಂತ್ರಿಸುವ ವ್ಯಕ್ತಿಯು ಅದರ ಕುತ್ತಿಗೆಗೆ ಹಾಕಿದ್ದ ಚೈನನ್ನು ಎಳೆದು ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ಆದರೆ, ಅಷ್ಟರವರೆಗೆ ಬಡಾಯಿ ಕೊಚ್ಚುತ್ತಿದ್ದವರು ಅಲ್ಲಿಂದ ಓಟ ಕೀಳುವುದು ವಿಡಿಯೋ ವೀಕ್ಷಕರಲ್ಲಿ ನಗು ತರಿಸುತ್ತದೆ.

ವೈರಲ್​ ಆಗಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಸಹ ಕಾರಣವಾಗಿದೆ. ಅಲ್ಲಿದ್ದವರು ಪ್ರಾಣಿಯನ್ನು ತಪ್ಪಾಗಿ ನಿರ್ವಹಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ, ಸಿಂಹವನ್ನು ಈ ರೀತಿ ಹಿಡಿದಿಟ್ಟುಕೊಳ್ಳಲು ಅವರಿಗೆ ಹಕ್ಕಿಲ್ಲ ಎಂದು ಟೀಕಿಸಿದ್ದಾರೆ. ಅಲ್ಲಿದ್ದ ಪ್ರತಿಯೊಬ್ಬರ ವಿರುದ್ಧ ಮೊಕದ್ದಮೆ ಹೂಡಬೇಕು ಎಂದು ಒಬ್ಬರು ಸಲಹೆ ಕೂಡ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments