Tuesday, December 6, 2022
Google search engine
HomeUncategorizedಶಿಕ್ಷಕಿ – ವಿದ್ಯಾರ್ಥಿನಿ ನಡುವೆ ಲವ್ವಿ ಡವ್ವಿ; ಮದುವೆಯಾಗಲು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ...

ಶಿಕ್ಷಕಿ – ವಿದ್ಯಾರ್ಥಿನಿ ನಡುವೆ ಲವ್ವಿ ಡವ್ವಿ; ಮದುವೆಯಾಗಲು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಟೀಚರ್

ಶಿಕ್ಷಕಿ – ವಿದ್ಯಾರ್ಥಿನಿ ನಡುವೆ ಲವ್ವಿ ಡವ್ವಿ; ಮದುವೆಯಾಗಲು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಟೀಚರ್

ಪ್ರೀತಿ ಕುರುಡು, ಪ್ರೇಮ ಕುರುಡು ಅನ್ನೋ ಮಾತಿದೆ. ಇದು ಅಕ್ಷರಶಃ ನಿಜವಾ ಅನ್ನೋದು ಅನೇಕ ಬಾರಿ ಬರುವ ಪ್ರಶ್ನೆ. ಆದರೆ ಕೆಲವೊಂದು ನಿದರ್ಶನ ನೋಡಿದರೆ ಇದು ನಿಜ ಅನ್ನಬಹುದು. ಇದೀಗ ಇಂಥಹದ್ದೇ ಒಂದು ಸ್ಟೋರಿ ಬಂದಿದೆ. ಪ್ರೀತಿ ಅನ್ನೋದೇ ಯಾರ ಮೇಲೆ ಹೇಗೆ ಆಗುತ್ತೆ ಅನ್ನೋದು ಗೊತ್ತಿಲ್ಲ. ಹಾಗೇ ಯಾರನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ.

ಹೌದು, ಕಾಲೇಜಿನ ಟೀಚರ್​ ಆಗಿ ಕೆಲಸ ಮಾಡುತ್ತಿದ್ದವಳಿಗೆ. ಅದೇ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಪ್ರೀತಿಯಾಗಿದೆ. ಇಬ್ಬರಿಗೂ ಈ ಪ್ರೀತಿ ಸಮ್ಮತಿಯಿತ್ತು. ಆದರೆ ಇಬ್ಬರ ಈ ರೀತಿ ಮದುವೆ ಸಮಸ್ಯೆ ಆಗಬಹುದು ಅಂತ ಆ ಶಿಕ್ಷಕಿ ಲಿಂಗ ಬದಲಾವಣೆ ಮಾಡಿಕೊಂಡು ಶಿಕ್ಷಕನಾಗಿದ್ದಾರೆ. ಇಂತದೊಂದು ಘಟನೆ ನಡೆದಿರೋದು ರಾಜಸ್ಥಾನದ ಭರತ್‌ಪುರದಲ್ಲಿ. ತನ್ನ ವಿದ್ಯಾರ್ಥಿನಿಯನ್ನು ಮದುವೆಯಾಗಲೇಬೇಕು ಎಂಬ ಹಠದಿಂದ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಶಿಕ್ಷಕ ಹಾಗೂ ವಿದ್ಯಾರ್ಥಿ ಮಾತನಾಡಿದ್ದು, ನಮ್ಮ ಒಪ್ಪಿಗೆಯಿಂದಲೇ ಮದುವೆ ಆಗಿದೆ ಎಂದಿದ್ದಾರೆ. ಪುರುಷನಾಗಿ ಬದಲಾಗಿರುವ ಶಿಕ್ಷಕ ಆರವ್ ಕುಂತಲ್ ಮಾತನಾಡಿ, ಆಕೆಯನ್ನು ಮದುವೆಯಾಗಬೇಕಿತ್ತು ಅದಕ್ಕಾಗಿ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಾಗಿದ್ದೆ. 2019ರ ಡಿಸೆಂಬರ್‌ನಲ್ಲಿ ಮೊದಲ ಹಂತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಇತ್ತೀಚೆಗೆ ಒಂದು ಶಸ್ತ್ರ ಚಿಕಿತ್ಸೆ ಆಯ್ತು ಎಂದಿದ್ದಾರೆ.

ಇನ್ನು ವಿದ್ಯಾರ್ಥಿನಿ‌ ಮಾತನಾಡಿ, ನಾವು ಮೊದಲಿನಿಂದಲೂ ಪ್ರೀತಿ ಮಾಡ್ತಾ ಇದ್ವಿ. ನಾನು ಅವರನ್ನು ತುಂಬ ಪ್ರೀತಿಸುತ್ತಿದ್ದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಾಗ ನಾನೂ ಇದ್ದೆ ಎಂದರು. ಇನ್ನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳದೇ ಇದ್ದರೂ ನಾನು ಅವರನ್ನು ಮದುವೆಯಾಗುತ್ತಿದ್ದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments