ಶಾಲೆಯಲ್ಲೇ ಜುಟ್ಟು ಹಿಡಿದು ಕಿತ್ತಾಡಿದ ಹುಡುಗಿಯರು; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಯರಿಬ್ಬರು ಮಾರಾಮಾರಿ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರಂಭದಲ್ಲಿ ಒಬ್ಬರಿಗೊಬ್ಬರು ಏರಿದ ದನಿಯಲ್ಲಿ ಕಿತ್ತಾಡುತ್ತಾರೆ. ಬಳಿಕ ಒಬ್ಬರನ್ನೊಬ್ಬರು ಏಟು ಕೊಟ್ಟುಕೊಳ್ಳುತ್ತಾರೆ. ಕೊನೆಗೆ ಜುಟ್ಟು ಹಿಡಿದು ಪೈಪೋಟಿಗೆ ಬಿದ್ದವರಂತೆ ತಳ್ಳಾಡಿ, ಹೊಡೆದಾಡಿಕೊಳ್ಳುತ್ತಾರೆ.
ಈ ವೇಳೆ ಅಲ್ಲೇ ಇದ್ದ ಸಹಪಾಠಿಗಳು ಜಗಳ ತಪ್ಪಿಸಲು ಪ್ರಯತ್ನಿಸುತ್ತಾರೆ, ಸಾಧ್ಯವಾಗುವುದೇ ಇಲ್ಲ. ಇದೇ ಸಮಯಕ್ಕೆ ಶಿಕ್ಷಕರೂ ತರಗತಿ ಒಳಗೆ ಪ್ರವೇಶ ಮಾಡಿದರೂ ಇವರಿಬ್ಬರ ಜಗಳ ಮುಂದುವರಿದೇ ಇರುತ್ತದೆ.
ಅಲ್ಲಿದ್ದ ಹುಡುಗರಿಗೆ ಮನರಂಜನೆಯಾಗಿ ಕಾಣುತ್ತದೆ, ಅವರು ಮಜಾ ತೆಗೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜಾಲತಾಣದಲ್ಲಿ ವೈರಲ್ ಆದ ವಿಡಿಯೋಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದು, ರಂಜನೀಯವಾಗಿ ಪರಿಗಣಿಸಿದ್ದಾರೆ.
https://www.instagram.com/p/CgvqWUDq-zv/?utm_source=ig_embed&utm_campaign=embed_video_watch_again