Saturday, November 26, 2022
Google search engine
HomeUncategorizedಶಾಲೆಗಳಲ್ಲಿ ಧ್ಯಾನ ವಿರೋಧಿಸಿ ಸಾಹಿತಿಗಳು, ಲೇಖಕರ ಪತ್ರ: ಸಿಎಂ ಹೇಳಿದ್ದೇನು ಗೊತ್ತಾ…?

ಶಾಲೆಗಳಲ್ಲಿ ಧ್ಯಾನ ವಿರೋಧಿಸಿ ಸಾಹಿತಿಗಳು, ಲೇಖಕರ ಪತ್ರ: ಸಿಎಂ ಹೇಳಿದ್ದೇನು ಗೊತ್ತಾ…?

ಶಾಲೆಗಳಲ್ಲಿ ಧ್ಯಾನ ವಿರೋಧಿಸಿ ಸಾಹಿತಿಗಳು, ಲೇಖಕರ ಪತ್ರ: ಸಿಎಂ ಹೇಳಿದ್ದೇನು ಗೊತ್ತಾ…?

ಉಡುಪಿ: ಶಾಲೆಗಳಲ್ಲಿ ಧ್ಯಾನ ವಿರೋಧಿಸಿ ಸಾಹಿತಿಗಳು, ಲೇಖಕರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮಾತನಾಡಿದ ಸಿಎಂ, ಶಾಲೆಗಳಲ್ಲಿ ಧ್ಯಾನ ವಿರೋಧಿ ಸಾಹಿತಿಗಳು, ಲೇಖಕರು ಪತ್ರ ಬರೆದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನನ್ನ ಗಮನಕ್ಕೆ ಬಂದ ನಂತರ ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಒಳ್ಳೆಯ ಕೆಲಸ ಪ್ರಾರಂಭಿಸುವಾಗ ಪರ, ವಿರೋಧದ ಚರ್ಚೆ ಆಗುತ್ತದೆ. ಎಲ್ಲವನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಮಾಡಲಿದೆ ಎಂದರು.

ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿರುವುದು ಸ್ವಾಗತಾರ್ಹ. ಸುಪ್ರೀಂಕೋರ್ಟ್ ಆದೇಶ ಎಲ್ಲಾ ಸಮುದಾಯಕ್ಕೆ ಆಶಾಕಿರಣವಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಜಾರಿಗೆ ತರಲಾಗಿದೆ. ಬಡವರು, ಅವಕಾಶ ವಂಚಿತರಿಗೆ ಬಹಳ ಉಪಯೋಗವಾಗಿದೆ ಎಂದರು.

ಸುಪ್ರೀಂಕೋರ್ಟ್ ಆದೇಶದಿಂದ ನನಗೆ ಬಹಳ ಸಂತೋಷವಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಬಡವರಿಗೆ ಆಶಾಕಿರಣ ಬೆಳವಣಿಗೆಯಾಗಿದೆ. ಹಿಂದುಳಿದವರು ಅವಕಾಶ ಪಡೆಯಲು ಆದೇಶದಿಂದ ಅನುಕೂಲವಾಗಿದೆ. ಇದಕ್ಕೆಲ್ಲ ಪ್ರಧಾನಿ ಮೋದಿ ಅಧಿಕಾರದಲ್ಲಿ ಇರುವುದೇ ಮೂಲ ಕಾರಣ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments