Friday, October 7, 2022
Google search engine
HomeUncategorizedಶಾಲಾ ಕಟ್ಟಡಕ್ಕೆ ಆಗ್ರಹಿಸಿ 70 ಕಿ.ಮೀ. ಪಾದಯಾತ್ರೆಗೆ ಮುಂದಾದ ವಿದ್ಯಾರ್ಥಿಗಳು

ಶಾಲಾ ಕಟ್ಟಡಕ್ಕೆ ಆಗ್ರಹಿಸಿ 70 ಕಿ.ಮೀ. ಪಾದಯಾತ್ರೆಗೆ ಮುಂದಾದ ವಿದ್ಯಾರ್ಥಿಗಳು

ಶಾಲಾ ಕಟ್ಟಡಕ್ಕೆ ಆಗ್ರಹಿಸಿ 70 ಕಿ.ಮೀ. ಪಾದಯಾತ್ರೆಗೆ ಮುಂದಾದ ವಿದ್ಯಾರ್ಥಿಗಳು

ತಮ್ಮ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಹೀಗಾಗಿ ಹೊಸ ಕಟ್ಟಡ ಮಂಜೂರು ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪಾದಯಾತ್ರೆಗೆ ಮುಂದಾಗಿದ್ದಾರೆ.

ಕಲಬುರಗಿ ಜಿಲ್ಲೆ ಘತ್ತರಗಾ ಪ್ರೌಢ ಶಾಲೆಯ 562 ವಿದ್ಯಾರ್ಥಿಗಳು, ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವಕ್ಕಾಗಿ ಕಲಬುರಗಿ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಪ್ರಸ್ತುತ ಈ ಶಾಲೆಯು ಮುಜರಾಯಿ ಇಲಾಖೆಯ ಜಾಗದಲ್ಲಿ ಕಟ್ಟಿರುವ ಕಟ್ಟಡದಲ್ಲಿ ನಡೆಯುತ್ತಿದ್ದು, ಇಲ್ಲಿಯೇ ವಿದ್ಯಾರ್ಥಿಗಳ ಆಟ ಪಾಠ ಸಾಗಿದೆ. ಹೀಗಾಗಿ ಹೊಸ ಕಟ್ಟಡಕ್ಕೆ ಆಗ್ರಹಿಸಿ ಸೆಪ್ಟೆಂಬರ್ 16ರಂದು ಶಾಲಾ ವಿದ್ಯಾರ್ಥಿಗಳು ನಡಿಗೆ ಆರಂಭಿಸಲಿದ್ದಾರೆ. ಸೆಪ್ಟೆಂಬರ್ 17ರಂದು ಕಲಬುರಗಿ ನಗರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments