Friday, October 7, 2022
Google search engine
HomeUncategorized‘ಶಕ್ತಿಧಾಮ’ಕ್ಕೆ ಸ್ವಯಂ ಸೇವಕನಾಗಲು ನಾನು ಸಿದ್ಧ ಎಂದ ನಟ ವಿಶಾಲ್

‘ಶಕ್ತಿಧಾಮ’ಕ್ಕೆ ಸ್ವಯಂ ಸೇವಕನಾಗಲು ನಾನು ಸಿದ್ಧ ಎಂದ ನಟ ವಿಶಾಲ್

‘ಶಕ್ತಿಧಾಮ’ಕ್ಕೆ ಸ್ವಯಂ ಸೇವಕನಾಗಲು ನಾನು ಸಿದ್ಧ ಎಂದ ನಟ ವಿಶಾಲ್

ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಹಲವು ತಿಂಗಳುಗಳೇ ಕಳೆದರೂ ಸಹ ಇಂದಿಗೂ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರು ಮಾಡಿರುವ ಮಾನವೀಯ ಕಾರ್ಯಗಳನ್ನು ಜನತೆ ಯಾವಾಗಲೂ ನೆನಪಿಸಿಕೊಳ್ಳುತ್ತಾರೆ.

ಮೈಸೂರಿನಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಪುನರ್ವಸತಿ ಕೇಂದ್ರ ‘ಶಕ್ತಿಧಾಮ’ವನ್ನು ಪುನೀತ್ ರಾಜಕುಮಾರ್ ಅವರು ಮುನ್ನಡೆಸಿಕೊಂಡು ಬಂದಿದ್ದು, ಅವರು ನಿಧನರಾದ ಸಂದರ್ಭದಲ್ಲಿ ತಮಿಳು ಚಿತ್ರರಂಗದ ನಟ ವಿಶಾಲ್, ಇದರ ಜವಾಬ್ದಾರಿಯನ್ನು ತಾವು ಹೊರಲು ಸಿದ್ಧ ಎಂದು ಹೇಳಿಕೊಂಡಿದ್ದರು.

ಇದೀಗ ವಿಶಾಲ್ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶಕ್ತಿಧಾಮಕ್ಕೆ ಶನಿವಾರದಂದು ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪುನೀತ್ ರಾಜಕುಮಾರ್ ಅವರದ್ದು ಅತ್ಯುತ್ತಮ ಕೆಲಸ. ಡಾ. ರಾಜಕುಮಾರ್ ಕುಟುಂಬದವರು ಅನುಮತಿ ನೀಡಿದರೆ ಶಕ್ತಿಧಾಮಕ್ಕೆ ನಾನು ಸ್ವಯಂ ಸೇವಕನಾಗಿ ಇರುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಶಿವರಾಜ್ ಕುಮಾರ್ ಅವರ ಜೊತೆ ಈ ಕುರಿತು ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments