Friday, December 9, 2022
Google search engine
HomeUncategorizedವೋಟರ್ ಐಡಿ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮುಗಿಸಿ, ಇಲ್ಲದಿದ್ದರೆ ಆಗಬಹುದು...

ವೋಟರ್ ಐಡಿ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮುಗಿಸಿ, ಇಲ್ಲದಿದ್ದರೆ ಆಗಬಹುದು ಸಮಸ್ಯೆ…!

ವೋಟರ್ ಐಡಿ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮುಗಿಸಿ, ಇಲ್ಲದಿದ್ದರೆ ಆಗಬಹುದು ಸಮಸ್ಯೆ…!

ದೇಶದಲ್ಲಿ ಮತದಾನ ಮಾಡಲು ವೋಟರ್‌ ಐಡಿ ಕಡ್ಡಾಯ. ವೋಟರ್ ಐಡಿಯನ್ನು ಹೊರತುಪಡಿಸಿ ಗುರುತನ್ನು ತೋರಿಸಲು ಆಧಾರ್ ಕಾರ್ಡ್ ಅನ್ನು ಸಹ ಬಳಸಲಾಗುತ್ತದೆ. ಯಾಕಂದ್ರೆ ಹಲವಾರು ಸೇವೆಗಳು ಮತ್ತು ಸೌಲಭ್ಯಗಳೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿದೆ.

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಅಭಿಯಾನ ಸಹ ಈಗಾಗ್ಲೇ ಪ್ರಾರಂಭವಾಗಿದೆ. ನಕಲಿ ವೋಟರ್‌ ಐಡಿಗಳನ್ನು ಪತ್ತೆ ಮಾಡುವುದು ಇದರ ಉದ್ದೇಶ. ಭಾರತೀಯ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ.

ಮತದಾರರ ಪಟ್ಟಿಯೊಂದಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಮತ್ತು ನಕಲಿ ನಮೂದುಗಳನ್ನು ತೆಗೆದುಹಾಕಲು ಜನರಿಗೆ 6B ಎಂಬ ಹೊಸ ಫಾರ್ಮ್‌ ಅನ್ನು ನೀಡಲಾಗಿದೆ. ಚುನಾವಣಾ ಆಯೋಗದ ಪ್ರಕಾರ ಒಂದೇ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾದ ನಿದರ್ಶನಗಳನ್ನು ಗುರುತಿಸಲು ಈ ಅಭಿಯಾನ ನೆರವಾಗಲಿದೆ.

ವೋಟರ್‌ ಐಡಿ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದು ಹೇಗೆ ?

ಇದಕ್ಕಾಗಿ ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ NVSP.in ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.

ನಿಮ್ಮ NVSP ಖಾತೆಗೆ ಲಾಗ್ ಇನ್ ಮಾಡಿ. ಸೈನ್ ಇನ್ ಮಾಡಿದ ನಂತರ, ಎಲೆಕ್ಟೋರಲ್ ರೋಲ್‌ನಲ್ಲಿ ಸರ್ಚ್‌ ಆಪ್ಷನ್‌ಗೆ ಹೋಗಿ.

ವೋಟರ್ ಐಡಿಯನ್ನು ಹುಡುಕಲು ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.

ನಿಮ್ಮ ಆಧಾರ್ ವಿವರಗಳನ್ನು ನಮೂದಿಸಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಪರಿಶೀಲನೆಯೊಂದಿಗೆ ಗುರುತನ್ನು ದೃಢೀಕರಿಸಿ.

ನಿಮ್ಮ ಆಧಾರ್ ಅನ್ನು ನಿಮ್ಮ ವೋಟರ್ ಐಡಿಯೊಂದಿಗೆ ಲಿಂಕ್ ಮಾಡಿದ ನಂತರ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ. ಈ ರೀತಿಯಲ್ಲಿ ಲಿಂಕಿಂಗ್‌ ಪ್ರಕ್ರಿಯೆ ಪೂರ್ಣಗಳ್ಳುತ್ತದೆ.

ಲಿಂಕ್‌ ಮಾಡಲು ಇನ್ನೊಂದು ಆಯ್ಕೆ

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ತೆರೆಯಿರಿ ಮತ್ತು ‘ಮತದಾರರ ನೋಂದಣಿ’ ಮೇಲೆ ಟ್ಯಾಪ್ ಮಾಡಿ.

ಎಲೆಕ್ಟೋರಲ್ ಅಥೆಂಟಿಕೇಶನ್ ಫಾರ್ಮ್ (ಫಾರ್ಮ್ 6 ಬಿ) ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ತೆರೆಯಿರಿ.

‘ಲೆಟ್ಸ್ ಸ್ಟಾರ್ಟ್’ ಕ್ಲಿಕ್ ಮಾಡಿ.ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು Send OTP ಮೇಲೆ ಟ್ಯಾಪ್ ಮಾಡಿ.

ನೀವು ಸ್ವೀಕರಿಸಿದ OTPಯನ್ನು ನಮೂದಿಸಿ ಮತ್ತು ‘ಪರಿಶೀಲಿಸು’ ಮೇಲೆ ಕ್ಲಿಕ್ ಮಾಡಿ. ಯೆಸ್ ಐ ಹ್ಯಾವ್ ವೋಟರ್ ಐಡಿ ಕ್ಲಿಕ್ ಮಾಡಿ ನಂತರ ನೆಕ್ಸ್ಟ್‌ಮೇಲೆ ಕ್ಲಿಕ್ ಮಾಡಿ.

ನಿಮ್ಮ ಮತದಾರರ ಗುರುತಿನ ಸಂಖ್ಯೆ ನಮೂದಿಸಿ, ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ‘ವಿವರಗಳನ್ನು ಪಡೆದುಕೊಳ್ಳಿ’ ಎಂಬುದರ ಕ್ಲಿಕ್ ಮಾಡಿ.

ಇದಾದ ಬಳಿಕ ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಿ.ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ದೃಢೀಕರಣದ ಸ್ಥಳವನ್ನು ನಮೂದಿಸಿ ಮತ್ತು ಕಂಪ್ಲೀಟೆಡ್‌ ಮೇಲೆ ಕ್ಲಿಕ್ ಮಾಡಿ.

ಫಾರ್ಮ್ 6B ಪೂರ್ವವೀಕ್ಷಣೆ ಪುಟ ತೆರೆಯುತ್ತದೆ. ನಿಮ್ಮ ವಿವರಗಳನ್ನು ಎರಡು ಬಾರಿ ಪರಿಶೀಲಿಸಿ ಮತ್ತು ನಿಮ್ಮ ಫಾರ್ಮ್ 6B ನ ಅಂತಿಮ ಸಲ್ಲಿಕೆಗಾಗಿ ‘ದೃಢೀಕರಿಸಿ’ ಎಂಬುದರ ಮೇಲೆ ಕ್ಲಿಕ್ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments