Thursday, August 11, 2022
Google search engine
HomeUncategorizedವೈರಲ್‌ ಆಗಿರೋ ಕಲ್ಲಂಗಡಿ ಪಿಜ್ಝಾ ನೋಡಿ ತಿನಿಸು ಪ್ರಿಯರಿಗೆ ಶಾಕ್‌….!

ವೈರಲ್‌ ಆಗಿರೋ ಕಲ್ಲಂಗಡಿ ಪಿಜ್ಝಾ ನೋಡಿ ತಿನಿಸು ಪ್ರಿಯರಿಗೆ ಶಾಕ್‌….!

ವೈರಲ್‌ ಆಗಿರೋ ಕಲ್ಲಂಗಡಿ ಪಿಜ್ಝಾ ನೋಡಿ ತಿನಿಸು ಪ್ರಿಯರಿಗೆ ಶಾಕ್‌….!

ಚಿತ್ರ ವಿಚಿತ್ರ ಫುಡ್‌ ಕಾಂಬಿನೇಶನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವೊಂದು ತಿನಿಸುಗಳು ಇಂಟ್ರೆಸ್ಟಿಂಗ್‌ ಎನಿಸಿದ್ರೆ ಇನ್ನು ಕೆಲವನ್ನು ನೆನೆಸಿಕೊಂಡ್ರೇ ವಾಕರಿಕೆ ಬಂದಂತಾಗಬಹುದು. ಸದ್ಯ ಹಣ್ಣುಗಳ ಪಿಝ್ಜಾ ಸಖತ್‌ ಟ್ರೆಂಡ್‌ನಲ್ಲಿದೆ. ಕೆಲ ದಿನಗಳ ಹಿಂದಷ್ಟೆ ವೈರಲ್‌ ಆಗಿದ್ದ ಅನಾನಸ್‌ ಪಿಜ್ಝಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.

ಇದೀಗ ಕಲ್ಲಂಗಡಿ ಪಿಜ್ಝಾ ಆಹಾರ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ಕಲ್ಲಂಗಡಿ ಸಿಪ್ಪೆಯನ್ನು ಪಿಜ್ಝಾ ಬೇಸ್‌ ಮಾಡಿದ ತಿಂಡಿ ಪೋತನೊಬ್ಬ ವಿಶಿಷ್ಟ ಪಿಜ್ಝಾ ತಯಾರಿಸಿದ್ದಾನೆ. ಕಲ್ಲಂಗಡಿ ಸಿಪ್ಪೆಯನ್ನೇ ಗ್ರಿಲ್‌ ಮಾಡಿ ಅದಕ್ಕೆ ಬಾರ್ಬಿಕ್ಯೂ ಸಾಸ್‌, ಪಿಜ್ಝಾ ಸಾಸ್‌, ಪೆಪ್ಪರೊನಿ ಸೇರಿದಂತೆ ಎಲ್ಲಾ ಟಾಪ್ಸ್‌ ಹಾಕಿ ಗಾರ್ನಿಶ್‌ ಮಾಡಿ ಮತ್ತೆ ಗ್ರಿಲ್‌ ಮಾಡಿದ್ದಾನೆ.

ರಾಷ್ಟ್ರೀಯ ಕಲ್ಲಂಗಡಿ ದಿನದ ಹಿನ್ನೆಲೆಯಲ್ಲಿ ಆತ ಈ ರೀತಿಯ ವಿಶಿಷ್ಟ ಪಿಜ್ಝಾ ತಯಾರಿಸಿಕೊಂಡು ಸವಿದಿದ್ದಾನೆ. ಆದ್ರೆ ಫುಡ್‌ ಲವರ್ಸ್‌ಗೆ ಈ ಕಾಂಬಿನೇಶನ್‌ ಇಷ್ಟವಾಗಿಲ್ಲ. ಒಳ್ಳೆಯ ಕಲ್ಲಂಗಡಿಯನ್ನು ಹಾಳು ಮಾಡಬೇಡಿ ಅಂತಾ ಕೆಲವರು ಕಮೆಂಟ್‌ ಮಾಡಿದ್ದಾರೆ. ಕಲ್ಲಂಗಡಿ ಮೇಲೆ ಇಂಥಾ ಅತ್ಯಾಚಾರ ಸಲ್ಲದು ಎಂದಿದ್ದಾರೆ. ಕೆಲವರಂತೂ ಈ ವಿಡಿಯೋ ನೋಡೋದೇ ಅಕ್ರಮ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

https://www.instagram.com/p/CgyxFtkFnrk/?utm_source=ig_embed&ig_rid=983b27fd-8503-45c5-8ed5-399bfe806a7d

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments