ವೇಗವಾಗಿ ಬಂದ ಕಾರ್ ಹರಿದು ಒಂದೇ ಕುಟುಂಬದ ನಾಲ್ವರ ದುರಂತ ಸಾವು

ವೇಗವಾಗಿ ಬಂದ ಕಾರ್ ಹರಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರೋ ದುರಂತ ಘಟನೆ
ವಾರಣಾಸಿಯ ಸಾರನಾಥ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗ್‌ಪುರ ಮೇಲ್ಸೇತುವೆ ಬಳಿ ನಡೆದಿದೆ. ಮೃತರಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಪುಟ್ಟ ಮಕ್ಕಳು ಸೇರಿದ್ದಾರೆ.
ಮೃತರನ್ನು ವಿಶಾಲ್, ಅವರ ಪತ್ನಿ ಇಂದ್ರಾವತಿ ದೇವಿ ಮತ್ತು 3 ವರ್ಷದ ಅನ್ಶಿಕಾ ಮತ್ತು ಸಂಧ್ಯಾ ಎಂದು ಗುರುತಿಸಲಾಗಿದೆ.
ಮದುವೆಗೆ ತೆರಳಬೇಕಿದ್ದ ಹೃದಯಪುರದ ಕುಟುಂಬ ರಸ್ತೆಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರಿನ ಚಾಲಕನು ಮದ್ಯಪಾನ ಮಾಡಿದ್ದು ಕಾರಿನ ನಿಯಂತ್ರಣವನ್ನು ಕಳೆದುಕೊಂಡಿದ್ದನು.
ವೇಗವಾಗಿ ಕಾರ್ ಓಡಿಸಿ ನಾಲ್ಕು ಜನರನ್ನು ಚಕ್ರಗಳ ಅಡಿಯಲ್ಲಿ ನಜ್ಜುಗುಜ್ಜುಗೊಳಿಸಿದ್ದನು. ಸ್ಥಳೀಯರು ಸಹಾಯಕ್ಕಾಗಿ ಧಾವಿಸಿ ಶವಗಳನ್ನು ಕಾರಿನಿಂದ ಹೊರತೆಗೆದರು.
ಏತನ್ಮಧ್ಯೆ ಚಾಲಕ ಸೇರಿದಂತೆ ಮೂವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ.