Sunday, January 29, 2023
Google search engine
HomeUncategorizedವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್’ ಕ್ರೂಸ್ ಪ್ರವಾಸ ಉದ್ಘಾಟನೆ; ಇಲ್ಲಿದೆ ಅದರ ವಿಶೇಷತೆ

ವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್’ ಕ್ರೂಸ್ ಪ್ರವಾಸ ಉದ್ಘಾಟನೆ; ಇಲ್ಲಿದೆ ಅದರ ವಿಶೇಷತೆ

ವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್’ ಕ್ರೂಸ್ ಪ್ರವಾಸ ಉದ್ಘಾಟನೆ; ಇಲ್ಲಿದೆ ಅದರ ವಿಶೇಷತೆ

ವಿಶ್ವದ ಅತಿ ಉದ್ದದ ನದಿ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆ ಹೊಂದಿರುವ ‘ಗಂಗಾ ವಿಲಾಸ್’ ಕ್ರೂಸ್ ಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದಾರೆ. ವಾರಣಾಸಿಯಲ್ಲಿ ಇದರ ಉದ್ಘಾಟನೆ ನೆರವೇರಿದ್ದು, ಇದರ ವಿಶೇಷತೆ ಕುರಿತು ಮಾಹಿತಿ ಇಲ್ಲಿದೆ.

ಗಂಗಾ, ಬ್ರಹ್ಮಪುತ್ರ ಸೇರಿದಂತೆ 27 ನದಿಗಳಲ್ಲಿ ‘ಗಂಗಾ ವಿಲಾಸ್’ ಕ್ರೂಸ್ ಸಂಚರಿಸಲಿದ್ದು, ಒಟ್ಟು 3,200 ಕಿಲೋಮೀಟರ್ ಕ್ರಮಿಸಲಿದೆ. 51 ದಿನಗಳ ಕಾಲ ಈ ಐಷಾರಾಮಿ ಹಡಗಿನಲ್ಲಿ ಪ್ರಯಾಣ ಮಾಡಬೇಕಿದ್ದು, 50 ವಿವಿಧ ಆಕರ್ಷಕ ತಾಣಗಳನ್ನು ಸಂದರ್ಶಿಸಬಹುದಾಗಿದೆ.

ಈ ಹಡಗಿನಲ್ಲಿ ಒಂದು ಬಾರಿಗೆ 36 ಪ್ರವಾಸಿಗರು ಮಾತ್ರ ಪ್ರಯಾಣಿಸಬಹುದಾಗಿದ್ದು, ಪ್ರಯಾಣಿಕರಿಗೆ 12.50 ಲಕ್ಷ ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಗಂಗಾ ವಿಲಾಸ್ ಕ್ರೂಸ್ ನಲ್ಲಿ 18 ಐಷಾರಾಮಿ ಸೂಟ್ ಗಳಿದ್ದು, ಮೂರು ಡೆಕ್ ಗಳನ್ನು ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments