Friday, March 24, 2023
Google search engine
HomeUncategorizedತಂಡದ ಎಲ್ಲಾ ಆಟಗಾರರಿಗೆ ತಲಾ 1.7 ಕೋಟಿ ರೂ. ಮೌಲ್ಯದ ಚಿನ್ನದ ಐಫೋನ್ ಕೊಟ್ಟ FIFA...

ತಂಡದ ಎಲ್ಲಾ ಆಟಗಾರರಿಗೆ ತಲಾ 1.7 ಕೋಟಿ ರೂ. ಮೌಲ್ಯದ ಚಿನ್ನದ ಐಫೋನ್ ಕೊಟ್ಟ FIFA ವಿಶ್ವಕಪ್ ವಿಜೇತ ಅರ್ಜೆಂಟಿನಾ ನಾಯಕ ಲಿಯೋನೆಲ್ ಮೆಸ್ಸಿ

ತಂಡದ ಎಲ್ಲಾ ಆಟಗಾರರಿಗೆ ತಲಾ 1.7 ಕೋಟಿ ರೂ. ಮೌಲ್ಯದ ಚಿನ್ನದ ಐಫೋನ್ ಕೊಟ್ಟ FIFA ವಿಶ್ವಕಪ್ ವಿಜೇತ ಅರ್ಜೆಂಟಿನಾ ನಾಯಕ ಲಿಯೋನೆಲ್ ಮೆಸ್ಸಿ

ಅರ್ಜೆಂಟೀನಾ ವಿಶ್ವಕಪ್ ವಿಜೇತ ತಂಡದ ಎಲ್ಲಾ ಆಟಗಾರರಿಗೆ ತಲಾ 1.7 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಐಫೋನ್ ಗಳನ್ನು ಲಿಯೋನೆಲ್ ಮೆಸ್ಸಿ ಖರೀದಿಸಿ ಕೊಟ್ಟಿದ್ದಾರೆ.

ಅರ್ಜೆಂಟೀನಾದ FIFA ವಿಶ್ವಕಪ್ ವಿಜೇತ ನಾಯಕ ಲಿಯೋನೆಲ್ ಮೆಸ್ಸಿ ಅವರು ತಮ್ಮ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಉಡುಗೊರೆಯಾಗಿ ಚಿನ್ನದ ಐಫೋನ್ ನೀಡಿದ್ದಾರೆ.

ವಿಶ್ವಕಪ್ ಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ಸೋಲಿಸಿ ಪ್ರತಿಷ್ಠಿತ ಟ್ರೋಫಿಯನ್ನು ಗೆದ್ದ ತಂಡದ ಆಟಗಾರರಿಗೆಲ್ಲಾ 1.73 ಕೋಟಿ ರೂ. ಮೌಲ್ಯದ ಅರ್ಜೆಂಟೀನಾದ ಲೋಗೋವನ್ನು ಒಳಗೊಂಡ ಚಿನ್ನದ ಐಫೋನ್ ನೀಡಲಾಗಿದೆ. ಪ್ಯಾರಿಸ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಮೆಸ್ಸಿ ಅವುಗಳನ್ನು ವಿತರಿಸಿದರು.

ಲಿಯೋನೆಲ್ ಅವರು ತಮ್ಮ ಹೆಮ್ಮೆಯ ಕ್ಷಣವನ್ನು ಆಚರಿಸಲು ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದ್ದರು ಎಂದು ಉದ್ಯಮಿ ಬೆನ್ ಲಿಯಾನ್ಸ್ ಹೇಳಿದ್ದಾರೆ.

ಲಿಯೋನೆಲ್ ಮೆಸ್ಸಿ ಅವರು 35 ಗೋಲ್ಡನ್ ಐಫೋನ್ 14 ಸಾಧನಗಳನ್ನು ಖರೀದಿಸಿದ್ದಾರೆ. ಅವರು ಅರ್ಜೆಂಟೀನಾ ರಾಷ್ಟ್ರೀಯ ತಂಡದ ಸಂಪೂರ್ಣ ನಿಯೋಗಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ. ಪ್ರತಿ ಫೋನ್‌ನಲ್ಲಿ ಕೊನೆಯ ಹೆಸರು, ಶರ್ಟ್‌ನ ಸಂಖ್ಯೆ ಮತ್ತು ಮೂರು ನಕ್ಷತ್ರಗಳೊಂದಿಗೆ AFA ಶೀಲ್ಡ್ ಅನ್ನು ಕೆತ್ತಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments