Friday, December 9, 2022
Google search engine
HomeUncategorizedವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ NSUI ಮಾಜಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ NSUI ಮಾಜಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ NSUI ಮಾಜಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ NSUI ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ.

ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಕಾಡಿನಲ್ಲಿ ತನ್ನ ಕಾರಿನಲ್ಲಿ ಅತ್ಯಾಚಾರವೆಸಗಿರುವ ಆರೋಪ NSUI ಮಾಜಿ ಪ್ರಧಾನ ಕಾರ್ಯದರ್ಶಿ ರುಬಾಹ್ ಮೆಮನ್ ನ ಮೇಲಿದೆ.

NSUI ಹೇಳುವಂತೆ 23 ವರ್ಷದ ಆರೋಪಿ ರುಹಾಬ್ ಮೆಮನ್‌ನನ್ನು ನವೆಂಬರ್ 16 ರಂದು ಅಧಿಕೃತ ಆದೇಶದ ಮೂಲಕ ಸಂಘಟನೆಯಿಂದ ಹೊರಹಾಕಲಾಯಿತು, ಮರುದಿನ ಅತ್ಯಾಚಾರ ಆರೋಪ ಕೇಸ್ ನಲ್ಲಿ ಅವರನ್ನು ಬಂಧಿಸಿದ್ದು ಕಾಕತಾಳೀಯವಾಗಿದೆ ಎಂದು ಹೇಳಿದೆ.

ಡಿಸೆಂಬರ್ 5 ರಂದು ನಡೆಯಲಿರುವ ಭಾನುಪ್ರತಾಪುರ್ ವಿಧಾನಸಭಾ ಉಪಚುನಾವಣೆಗೆ ಮೆಮನ್ ಚುನಾವಣಾ ಸಹ ಉಸ್ತುವಾರಿ ಆಗಿದ್ದರು.

ರುಹಾಬ್ ಮತ್ತು ದೂರುದಾರರು ಒಬ್ಬರಿಗೊಬ್ಬರು ಪರಿಚಿತರು. ಆಕೆಯನ್ನು ವಾಹನದಲ್ಲಿ ಕರೆದುಕೊಂಡು ಹೋಗುವ ನೆಪದಲ್ಲಿ ಕಂಕೇರ್ ಪಟ್ಟಣದಿಂದ ಸುಮಾರು 20 ಕಿಮೀ ದೂರದಲ್ಲಿರುವ ವ್ಯಾಸ್ಕೊಂಗೇರಾ ಅರಣ್ಯಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments