Friday, March 24, 2023
Google search engine
HomeUncategorizedವಿಗ್‌ಗಳ ತಯಾರಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ವಿಗ್‌ಗಳ ತಯಾರಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ವಿಗ್‌ಗಳ ತಯಾರಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ಸಾಮಾನ್ಯವಾಗಿ ನಾವು ತಿನ್ನಲು ಇಷ್ಟ ಪಡುವ ಕುರುಕಲು ತಿಂಡಿಗಳನ್ನು ಹೇಗೆಲ್ಲಾ ಮಾಡಲಾಗುತ್ತದೆ ಎಂಬ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ.

ಆದರೆ ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ತಲೆಗೆ ಹಾಕುವ ವಿಗ್‌ಗಳನ್ನು ಹೇಗೆಲ್ಲಾ ಮಾಡಲಾಗುತ್ತದೆ ಎಂದು ತೋರಿಸಲಾಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲ ಕೃತಕ ಕೂದಲಿನ ಖರೀದಿ ಮಾಡಲು ಭಾರೀ ಕಿರಿಕಿರಿ ಮಾಡಿಕೊಳ್ಳುವಂತಾಗಿದೆ.

ವಿಗ್‌ಗಳ ತಯಾರಿಯಲ್ಲಿ ಏನೆಲ್ಲಾ ಮಟ್ಟಗಳಿವೆ ಎಂದು ಟಿಕ್‌ಟಾಕ್ ವಿಡಿಯೋವೊಂದರಲ್ಲಿ ತೋರಲಾಗಿದ್ದು, ಅದನ್ನೀಗ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಬ್ಯಾಗೊಂದರಿಂದ ವಿಗ್‌ಗಳ ಬಂಡಲ್‌ಅನ್ನು ತೆಗೆದು ಅವುಗಳನ್ನು ಪ್ರತ್ಯೇಕಿಸುವುದರಿಂದ ಈ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಸೂಜಿಗಳಿರುವ ವಸ್ತುವೊಂದರ ಮೇಲೆ ಈ ವಿಗ್‌ ಬಂಡಲ್‌ಗಳನ್ನು ಇಡಲಾಗಿದ್ದು ಸಂಸ್ಕರಣೆ ಮಾಡಲಾಗುತ್ತದೆ. ಇದಾದ ಬಳಿಕ ವಿಗ್‌ನಲ್ಲಿರುವ ಕೂದಲನ್ನು ನೆಟ್ಟಗಾಗಿಸಿ ವ್ಯವಸ್ಥಿತವಾಗಿರುವ ಬಂಡಲ್‌ಗಳನ್ನಾಗಿ ಮಾಡಿ ವಿಗ್‌ಗಳಿಗೆ ಬಳಸಲು ಸಜ್ಜುಗೊಳಿಸಲಾಗುತ್ತದೆ.

ಈ ಇಡೀ ಪ್ರಕ್ರಿಯೆ ಗಲೀಜಾದ ಜಾಗದಲ್ಲಿ ನಡೆಯುತ್ತಿದ್ದು, ವಿಗ್‌ಗಳ ಬಳಕೆ ಮಾಡುವ ಮುನ್ನ ಜನರು ಪದೇ ಪದೇ ಯೋಚಿಸುವಂತೆ ಮಾಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments